ಸಮಾಜ ಅಭಿವೃದ್ಧಿ ಯೋಜನೆಗಳಿಗೆ ಕೈಜೋಡಿಸಿ: ಕಲಾವಿದ ಮೈಬುಬ್‌ಸಾಬ್ ಅತ್ತಾರ ಸಲಹೆ

Untitled design
ಯಲಬುರ್ಗಾ ತಾಲೂಕಿನ ಯಾಪಲದಿನ್ನಿಯಲ್ಲಿ ಕಲ್ಪತರು ಸಾಂಸ್ಕೃತಿಕ ಯುವಕ ಸಂಘದಿಂದ ಸರ್ಕಾರಿ ಯೋಜನೆಗಳ ಕುರಿತು ಜಾಗೃತಿ ಮೂಡಿಸಲಾಯಿತು. ಕಲಾವಿದರಾದ ಮೈಬುಸಾಬ್ ಅತ್ತಾರ, ದಾವಲ್‌ಸಾಬ್ ಅತ್ತಾರ, ಶರಣಪ್ಪ ಬನ್ನಿಗೋಳ, ರೇಣುಕಾ ಮಡಿವಾಳರ, ಖಾಜಾಹುಸೇನ್ ಇದ್ದರು.
Published on

ಯಲಬುರ್ಗಾ: ಸಾರ್ವಜನಿಕರು ಸರ್ಕಾರಿ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹಿರಿಯ ಕಲಾವಿದ ಮೈಬುಬ್‌ಸಾಬ್ ಅತ್ತಾರ ಹೇಳಿದರು.


ತಾಲೂಕಿನ ಯಾಪಲದಿನ್ನಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹಾಬಲಕಟ್ಟಿಯ ಕಲ್ಪತರು ಸಾಂಸ್ಕೃತಿಕ ಯುವಕ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸರ್ಕಾರಿ ಯೋಜನೆಗಳ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಮಹಿಳೆಯರಿಗಾಗಿ ಗೃಹಲಕ್ಷ್ಮಿ, ಶಕ್ತಿ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಬೇಕು. ಸಮಾಜ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕು ಎಂದರು.


ಕಲಾವಿದರಾದ ದಾವಲ್‌ಸಾಬ್ ಅತ್ತಾರ, ಶರಣಪ್ಪ ಬನ್ನಿಗೋಳ, ರೇಣುಕಾ ಮಡಿವಾಳರ, ಖಾಜಾಹುಸೇನ್ ಹಾಬಲಕಟ್ಟಿ ತಂಡ ಗೀಗಿ ಪದಗಳ ಮೂಲಕ ಯೋಜನೆಗಳ ಅರಿವು ಮೂಡಿಸಿತು. ಪ್ರಮುಖರಾದ ಹನುಮಂತಪ್ಪ ಹುಣಸಿಹಾಳ ,ಹನುಮಂತಪ್ಪ ಕವಳಕೇರಿ, ಚಂದ್ರಪ್ಪ ದಿಪಾಲಿ, ಕಳಕಯ್ಯ ಹಿರೇಮಠ, ಶೇಖಪ್ಪ ವಾಲ್ಮೀಕಿ, ಶರಣಪ್ಪ ಕಲಕಬಂಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net