ಅಂಗಡಿಗಳಿಗೆ ದಂಡ ವಿಧಿಸಿದ ಅಧಿಕಾರಿಗಳು

06 Raibag 1B-Web
ರಾಯಬಾಗದಲ್ಲಿರುವ ದಿನಸಿ ಅಂಗಡಿಯನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್.ಆರ್. ಮಾಂಗ ಪರಿಶೀಲಿಸಿದರು. ವಿ.ಆರ್. ಬಳ್ಳಾರಿ ಇತರರು ಇದ್ದರು.
Published on

ರಾಯಬಾಗ: ಇಲ್ಲಿನ ಪಪಂ ಮುಖ್ಯಾಧಿಕಾರಿ ಎಸ್.ಆರ್.ಮಾಂಗ ಮತ್ತು ಸಿಬ್ಬಂದಿ ಬುಧವಾರ ಅವಧಿ ಮೀರಿದ ತಂಪು ಪಾನೀಯ ಮಾರಾಟ ಮಾಡುತ್ತಿದ್ದ ಬೇಕರಿ ಹಾಗೂ ಅಂಗಡಿಗಳಿಗೆ ದಂಡ ವಿಧಿಸಿದರು. ಬಳಿಕ ಅಂಗಡಿಗಳಲ್ಲಿ ಸ್ಯಾನಿಟೈಸರ್ ಬಳಕೆ ಮಾಡುತ್ತಿರುವ ಕುರಿತು ಪರಿಶೀಲಿಸಿದರು. ಸಾರ್ವಜನಿಕ ಸ್ಥಳಗಳಲ್ಲಿ ಗುಟ್ಖಾ ತಿಂದು ಉಗುಳುವವರು ಹಾಗೂ ಮಾಸ್ಕ್ ಧರಿಸದೇ ಓಡಾಡುತ್ತಿರುವವರಿಗೆ ದಂಡ ವಿಧಿಸಿದರು. ಅವಧಿ ಮೀರಿದ ತಂಪು ಪಾನೀಯಗಳನ್ನು ಚರಂಡಿಗೆ ಸುರಿದು ನಾಶಪಡಿಸಲಾಯಿತು. ಸಿಬ್ಬಂದಿ ವಿ.ಆರ್. ಬಳ್ಳಾರಿ, ಬಿ.ಎಂ. ಬಿಲವಡೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net