ಆಶ್ರಯ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ

Manvi cpiml protst
ಪೋತ್ನಾಳ ಗ್ರಾಮದಲ್ಲಿ ನಾಡ ತಹಸೀಲ್ದಾರ್ ಸತೀಶಗೆ ಸಿಪಿಐಎಂಎಲ್ ತಾಲೂಕು ಘಟಕ ಗುರುವಾರ ಮನವಿ ಸಲ್ಲಿಸಿತು. ತಾಲೂಕು ಕಾರ್ಯದರ್ಶಿ ಯಲ್ಲಪ್ಪ ಉಟಕನೂರು, ಪ್ರಮುಖರಾದ ನಾಗರಾಜ ತಡಕಲ್, ಯಲ್ಲಮ್ಮ, ಮಲ್ಲಮ್ಮ, ಹನುಮಂತಿ ಇತರರಿದ್ದರು.
Published on

ಮಾನ್ವಿ: ತಡಕಲ್ ಗ್ರಾಮದ 52 ಆಶ್ರಯ ಮನೆಗಳ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ, ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಸಿಪಿಐಎಂಎಲ್ ತಾಲೂಕು ಘಟಕ ಗುರುವಾರ ಪೋತ್ನಾಳ ಬಳಿ ರಾಜ್ಯ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿತು.

ತಾಲೂಕಿನ ಹಿರೇಕೊಟ್ನೆಕಲ್ ಹೋಬಳಿಯ ತಡಕಲ್ ಗ್ರಾಮದ ಸರ್ವೇ ನಂ. 8 ರಲ್ಲಿ ಸರ್ಕಾರದಿಂದ ಒಟ್ಟು 52 ಫಲಾನುಭವಿಗಳಿಗೆ 1994 ರಲ್ಲಿಯೇ ಆಶ್ರಯ ಮನೆಗಳು ಮಂಜೂರಾಗಿವೆ. ಆದರೆ, ಈವರೆಗೆ ಹಕ್ಕುಪತ್ರ ವಿತರಣೆ ಮಾಡಿಲ್ಲ. ಅಲ್ಲಿನ ಜನರ ಮನೆಗಳಿಗೆ ಹೋಗುವುದಕ್ಕೆ ಸರಿಯಾದ ರಸ್ತೆ ನಿರ್ಮಿಸಿಲ್ಲ. ಕೂಡಲೇ ಪಟ್ಟಾ ವಿತರಿಸುವುದರ ಜತೆಗೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಒತ್ತಾಯಿಸಿದರು.

ಪೋತ್ನಾಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಗಳನ್ನು ನೇಮಕ ಮಾಡಬೇಕು. ಉಟಕನೂರು ಮತ್ತು ಪೋತ್ನಾಳ್ ಗ್ರಾಮದ ಸಾರ್ವಜನಿಕರಿಗೆ ಮೂಲಸೌಕರ್ಯ ಒದಗಿಸಬೇಕು. ಎರಡೂ ಗ್ರಾಮ ಪಂಚಾಯತಿಯಲ್ಲಿ ಜೆಜೆಎಂ ಯೋಜನೆಯ ಕಾಮಗಾರಿ ಅವೈಜ್ಞಾನಿಕವಾಗಿದ್ದು, ತನಿಖೆಗೆ ಒಳಪಡಿಸಬೇಕು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಬಳಿಕ ನಾಡ ತಹಸೀಲ್ದಾರ್ ಸತೀಶಗೆ ಮನವಿ ಸಲ್ಲಿಸಿದರು.

ಸಿಪಿಎಂಎಲ್ ತಾಲೂಕು ಕಾರ್ಯದರ್ಶಿ ಯಲ್ಲಪ್ಪ ಉಟಕನೂರು, ಮಲ್ಲು ತಡಕಲ್, ಪ್ರಕಾಶ ಧೋತರಬಂಡಿ, ನಾಗರಾಜ ತಡಕಲ್, ಸಣ್ಣಪ್ಪ, ಹನುಮಂತ ಯಾದವ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net