

ಕಂಪ್ಲಿ: ಲೋಕಸಭಾ ಚುನಾವಣೆ ನಿಮಿತ್ತ ಕ್ಷೇತ್ರದ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಂಗವಿಕಲರಿಗೆ ಈಗಾಗಲೇ 12ಡಿ ಫಾರ್ಮ್ ವಿತರಿಸಲಾಗಿದೆ ಎಂದು ತಹಸೀಲ್ದಾರ್ ಶಿವರಾಜ ತಿಳಿಸಿದ್ದಾರೆ.
85ವರ್ಷ ಮೇಲ್ಪಟ್ಟ 1158 ಹಿರಿಯ ಮತದಾರರಿದ್ದು, ಬಿಎಲ್‌ಒ ಹಾಗೂ ವಿಎಗಳು ಮನೆಮನೆಗೆ ತೆರಳಿ 924 ಹಿರಿಯ ನಾಗರಿಕರಿಗೆ 12ಡಿ ಫಾರ್ಮ್ ನೀಡಿದ್ದಾರೆ. ಇದರಲ್ಲಿ 906 ಹಿರಿಯರು ಮತಗಟ್ಟೆಗೆ ಬಂದು ಮತದಾನ ಮಾಡುವುದಾಗಿ, 18 ಜನರು ಮನೆಯಲ್ಲಿಯೇ ಮತದಾನ ಮಾಡುವುದಾಗಿ ತಿಳಿಸಿದ್ದಾರೆ.
4316 ಅಂಗವಿಕಲರಿದ್ದು, ಇದರಲ್ಲಿ 4195 ಜನರು ಮತಗಟ್ಟೆಗೆ ಬಂದು ಮತದಾನ ಮಾಡುವುದಾಗಿ ಹೇಳಿದ್ದು, 28 ಜನ ಮನೆಯಲ್ಲಿಯೇ ವೋಟ್ ಮಾಡುವುದಾಗಿ ತಿಳಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.