ಆತ್ಮಶುದ್ಧಿಗೆ ಚಿಂತನೆ ಅಗತ್ಯ

1RAM3
Published on

ರಾಮದುರ್ಗ: ಆತ್ಮಶಕ್ತಿಯನ್ನು ಕ್ರಮಬದ್ಧವಾಗಿ ನಿತ್ಯ ಸಾಧನೆ ಮೂಲಕ ಪ್ರಜ್ವಲಿಸಿದಲ್ಲಿ ಮಾನವ ದೇವ ಮಾನವನಾಗಲು ಸಾಧ್ಯವಿದೆ ಎಂದು ಡಿವೈನ್​

ಪಾರ್ಕ್​ನ ಚಿಂತಕಿ ಸುಜಾತಾ ರಾಮಕೃಷ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಬಾಣಕಾರ ಪೇಟೆಯ ಶ್ರೀಬನಶಂಕರಿ ದೇವಿ ಸಭಾಭವನದಲ್ಲಿ ವಿವೇಕ ಜಾಗೃತಿ ಬಳಗದ ನೇತೃತ್ವದಲ್ಲಿ ಜರುಗಿದ ಆತ್ಮೋನ್ನತಿ ಶಿಬಿರದಲ್ಲಿ ಅವರು ಮಾತನಾಡಿದರು. ಇಂದಿನ ಒತ್ತಡದ ಜೀವನದಲ್ಲಿ ಪ್ರತಿಯೊಬ್ಬರೂ ಆತ್ಮಶುದ್ಧಿಗೆ ಚಿಂತಿಸಬೇಕಾದ ಅಗತ್ಯವಿದೆ. ಡಿವೈನ್​ ಪಾರ್ಕ್​ ಆಶ್ರಯದಲ್ಲಿ ಜರುಗುತ್ತಿರುವ ಆತ್ಮೋನ್ನತಿ ಶಿಬಿರದ ಸದ್ಬಳಕೆ ಮಾಡಿಕೊಳ್ಳಬೇಕೆಂದರು.

ವಿವೇಕ ಜಾಗೃತಿ ಬಳಗದ ಪಾಠಶ್ರೀ ವೀಣಾ ಪಟ್ಟಣ, ಯಶೋದಾ ಹನಮನೇರಿ, ಅಧ್ಯತೆ ವಹಿಸಿದ್ದ ಜಾಗೃತ ಬಳಗದ ಅಧ್ಯೆ ಸುಮನ್​ ವಜ್ಜರಮಟ್ಟಿ ಮಾತನಾಡಿದರು.ವಿಶ್ವ ಹಿಂದು ಪರಿಷತ್​ ಅಧ್ಯ ಪ್ರಕಾಶ ಸೂಳಿಭಾಂವಿ, ಎಚ್​.ಕೆ. ದಾಸರ ಇತರರಿದ್ದರು.ವಿ.ಬಿ. ಹೊನ್ನಳ್ಳಿ ಸ್ವಾಗತಿಸಿದರು. ಶೋಭಾ ದಾನಪ್ಪನವರ ನಿರೂಪಿಸಿದರು. ಪಿ.ಟಿ. ದಸ್ಮನಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net