ಸ್ವ ಉದ್ಯೋಗಕ್ಕಾಗಿ ತರಬೇತಿ ಕಾರ್ಯಾಗಾರ

Kampli Training
ಕಂಪ್ಲಿಯಲ್ಲಿ ಗಿಗ್ ಕಾರ್ಮಿಕರ ತರಬೇತಿ ಕಾರ್ಯಾಗಾರಕ್ಕೆ ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಿ.ಮಲ್ಲಿಕಾರ್ಜುನ ಚಾಲನೆ ನೀಡಿದರು. ಪ್ರಮುಖರಾದ ಪವಿತ್ರಾ ಶಿವನಗೌಡ, ಕೆ.ವಿರೂಪಾಕ್ಷ, ಸ್ವಾತಿ, ಶಿವನಗೌಡ ಇದ್ದರು.
Published on

ಕಂಪ್ಲಿ: ಪರಿಶಿಷ್ಟರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವುದರ ಜತೆಗೆ ಸ್ವ ಉದ್ಯೋಗ ಕಲ್ಪಿಸಿಕೊಡಲು ಗಿಗ್ ಕಾರ್ಮಿಕ ತರಬೇತಿ ಆಯೋಜಿಸಲಾಗಿದೆ ಎಂದು ಬಳ್ಳಾರಿಯ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಬಿ.ಮಲ್ಲಿಕಾರ್ಜುನ ಹೇಳಿದರು.

ಇಲ್ಲಿನ ಪವಿತ್ರಾ ಚಾರಿಟಬಲ್ ಟ್ರಸ್ಟ್ ಆವರಣದಲ್ಲಿ ಸೋಮವಾರ ಗಿಗ್ ಕಾರ್ಮಿಕರ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಪರಿಶಿಷ್ಟರು ಆರ್ಥಿಕ ಸಬಲತೆ ಹೊಂದಲು ಸ್ವ ಉದ್ಯೋಗ ಕೈಗೊಳ್ಳುವಂತೆ ಪ್ರೋತ್ಸಾಹಿಸಲು ಗಿಗ್ ತರಬೇತಿ ಆಯೋಜಿಸಿದೆ. ಕೂಲಿ ಕೆಲಸ ಹೊರತುಪಡಿಸಿ ಸಂಪಾದನೆಗೆ ಪೂರಕ ವಾತಾವರಣ ಕಲ್ಪಿಸುವುದಾಗಿದೆ. ಮಹಿಳೆಯರು ಸ್ವಉದ್ಯೋಗ ಕಂಡುಕೊಳ್ಳಲು ಸರ್ಕಾರ ವಿವಿಧ ತರಬೇತಿ ಯೋಜನೆಗಳನ್ನು ಕಲ್ಪಿಸಿದ್ದು ಸದುಪಯೋಗಪಡಿಸಿಕೊಳ್ಳಬೇಕಿದೆ ಎಂದರು.

ಪವಿತ್ರಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷೆ ಪವಿತ್ರಾ ಶಿವನಗೌಡ ಮಾತನಾಡಿ, ಫ್ಲಿಪ್‌ಕಾರ್ಟ್, ಓಲಾ, ಉಬರ್ ಸೇರಿ ಖಾಸಗಿ ರಂಗಗಳಲ್ಲಿ ಆನ್‌ಲೈನ್ ವ್ಯವಹಾರದ ತರಬೇತಿ ನೀಡಲಾಗುವುದು. ಕಂಪ್ಲಿ ಮತ್ತು ಸಂಡೂರು ತಾಲೂಕಿನ ಹತ್ತು ಕಡೆ 500 ಜನರಿಗೆ ತರಬೇತಿ ನೀಡಲಾಗುತ್ತಿದೆ ಎಂದರು. ನಿಲಯ ಪಾಲಕ ಕೆ.ವಿರೂಪಾಕ್ಷಿ, ತರಬೇತುದಾರರಾದ ರಜನಿ, ಸ್ವಾತಿ, ಉದಯಮೇರಿ, ಶೈಲಜಾ, ಪ್ರಮುಖ ಶಿವನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net