ಸ್ವಯಂ ಉದ್ಯೋಗಕ್ಕೆ ಜ್ಞಾನ ವಿಕಾಸ ಕೇಂದ್ರ ಪೂರಕ

Untitled design (2)
ಗಂಗಾವತಿಯ ವಿದ್ಯಾನಗರದ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಎಸ್‌ಕೆಡಿಆರ್‌ಡಿಪಿಯ ಜ್ಞಾನ ವಿಕಾಸ ಕೇಂದ್ರವನ್ನು ನಗರಸಭೆ ಸದಸ್ಯ ಉಮೇಶ ಸಿಂಗನಾಳ್ ಸೋಮವಾರ ಉದ್ಘಾಟಿಸಿದರು. ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜಾ, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾರದಾ, ಮೇಲ್ವಿಚಾರಕಿ ನಾಗಮಣಿ, ಸೇವಾ ಪ್ರತಿನಿಧಿಗಳಾದ ಗಂಗಮ್ಮ ಇತರರಿದ್ದರು.
Published on

ಗಂಗಾವತಿ: ಮಹಿಳಾ ಸಬಲೀಕರಣಕ್ಕಾಗಿ ಹಲವು ಯೋಜನೆಗಳು ಜಾರಿಯಲ್ಲಿದ್ದು, ಕೌಶಲತೆ ರೂಢಿಸಿಕೊಳ್ಳುವುದರೊಂದಿಗೆ ಅಭಿವೃದ್ಧಿ ಹೊಂದಬೇಕು ಎಂದು ನಗರಸಭೆ ಸದಸ್ಯ ಉಮೇಶ ಸಿಂಗನಾಳ್ ಹೇಳಿದರು.


ನಗರದ ವಿದ್ಯಾನಗರದ ಅಯ್ಯಪ್ಪ ಸ್ವಾಮಿ ದೇವಾಲಯದ ಆವರಣದಲ್ಲಿ ಎಸ್‌ಕೆಡಿಆರ್‌ಡಿಪಿಯ ಜ್ಞಾನ ವಿಕಾಸ ಕೇಂದ್ರ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕೆ ಉತ್ತೇಜನ ನೀಡಲಾಗುತ್ತಿದ್ದು, ಕೌಶಲಾಭಿವದ್ಧಿ ಹೆಚ್ಚಿಸಲು ಜ್ಞಾನ ವಿಕಾಸ ಕೇಂದ್ರ ಪೂರಕವಾಗಿದೆ. ವ್ಯಕ್ತಿತ್ವ ವಿಕಸನ, ಆರೋಗ್ಯ, ಸಂಸ್ಕೃತಿ ಮತ್ತು ಸಂಸ್ಕಾರ ರಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಕೌಟುಂಬಿಕ ಸಾಮರಸ್ಯದ ಕೌನ್ಸಿಲಿಂಗ್ ಜತೆಗೆ ಕಾನೂನಿನ ಅರಿವು ನೀಡಲಾಗುವುದು ಎಂದರು.


ಉಪನ್ಯಾಸಕಿ ಲಲಿತಾ ಕಂದಗಲ್ ಮಾತನಾಡಿ, ತರಬೇತಿ ಕಾರ್ಯಾಗಾರದ ಮೂಲಕ ಮಹಿಳೆಯಲ್ಲಿ ಜಾಗೃತಿ ಮೂಡಿಸಲಾಗುತ್ತಿದ್ದು, ಗೃಹ ನಿರ್ವಹಣೆ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಿದರು.


ಟ್ರಸ್ಟ್ ಯೋಜನೆಗಳ ಕುರಿತು ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜಾ ಮಾಹಿತಿ ನೀಡಿದರು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಾರದಾ, ಮೇಲ್ವಿಚಾರಕಿ ನಾಗಮಣಿ, ಸೇವಾ ಪ್ರತಿನಿಧಿಗಳಾದ ಗಂಗಮ್ಮ, ಕವಿತಾ, ಮಾಬುನಿ, ಜನ್ನತ್ ಮೆಲನ್, ರತ್ನಮ್ಮ ಸೇರಿ ಜ್ಞಾನವಿಕಾಸ ಕೇಂದ್ರದ ಸದಸ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net