

ಬೆಳಗಾವಿ: ಶಾಲೆಗೆ ಆಟದ ಮೈದಾನ, ಸುಸಜ್ಜಿತ ಶೌಚಗೃಹ ನಿರ್ಮಾಣ ಸೇರಿ ಶಾಲೆ ಅಭಿವೃದ್ಧಿಗೆ ಆರ್ಥಿಕ ಸಹಾಯ ನೀಡುವಂತೆ ಜಿಲ್ಲೆಯ ಖಾನಾಪುರ ತಾಲೂಕಿನ ಡೊಂಗರಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ಮಾಜಿ ವಿದ್ಯಾರ್ಥಿಗಳು ಹಾಗೂ ಶಾಲಾ ಸುಧಾರಣೆ ಸಮಿತಿ ಸದಸ್ಯರು ಸಚಿವ ಸತೀಶ ಜಾರಕಿಹೊಳಿ ಅವರಿಗೆ ಈಚೆಗೆ ನಗರದಲ್ಲಿ ಮನವಿ ಸಲ್ಲಿಸಿದರು.
1957ರಲ್ಲಿ ಸ್ಥಾಪನೆಯಾದ ಡೊಂಗರಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಕಲಿತ ನೂರಾರು ವಿದ್ಯಾರ್ಥಿಗಳು ಭವಿಷ್ಯ ರೂಪಿಸಿಕೊಂಡು, ಬಹುತೇಕ ಎಲ್ಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಹಳೇ ವಿದ್ಯಾರ್ಥಿಗಳು ದೇಣಿಗೆ ಸಂಗ್ರಹಿಸಿ ಅಲ್ಪ ಅಭಿವೃದ್ಧಿ ಕಾಮಗಾರಿ ಮಾಡಲಾಗಿದೆ. ಇನ್ನುಳಿದ ಅಭಿವೃದ್ಧಿಗಾಗಿ ಅಂದಾಜು 50 ಲಕ್ಷ ರೂ. ಅವಶ್ಯಕತೆಯಿದ್ದು, ಆರ್ಥಿಕ ಸಹಾಯ ಮಾಡುವಂತೆ ಮನವಿ ಮೂಲಕ ವಿನಂತಿಸಿದರು. ಸಹದೇವ ಗವಾಳಕರ, ಸ್ಮೀತಾ ದೇಸಾಯಿ, ಸಂಜಯ ಗಾವಡೆ, ಹನುಮಂತ ಗುರವ, ಶಾಂತಿನಾಥ ಬುವಾಜಿ, ಪೂಜಾ ಸ್ತಿ, ಶ್ರೀಧರ ಪಾಟೀಲ ಇತರರಿದ್ದರು.