

ಮುರಗೋಡ: ಬೆಲಹೊಂಗಲ ೇತ್ರದ ಗ್ರಾಮೀಣ ಪ್ರದೇಶದ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟು ಹೋಗಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಅನುದಾನ ತಂದು ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.
ಸಮೀಪದ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ 4 ಕಿ.ಮೀ. ಮರಕುಂಬಿ&ಹಾರುಗೊಪ್ಪ ಸಂಪರ್ಕಿಸುವ ಮುಖ್ಯರಸ್ತೆ ಕಾಮಗಾರಿ ನಿರ್ಮಾಣಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಮೇ, ಜೂನ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಮರಕುಂಬಿ&ಹಾರುಗೊಪ್ಪ ರಸ್ತೆ ಹಾಳಾಗಿ ಹಲವು ದಿನಗಳಿಂದ ರಸ್ತೆ ಸಂಪರ್ಕ ಕಡಿತವಾಗಿತ್ತು. ಈ ಭಾಗದ ಚಚಡಿ, ಹಾರುಗೊಪ್ಪ, ಗೊಂತಮಾರ ಗ್ರಾಮದ ಸಾರ್ವಜನಿಕರ ತೊಂದರೆ ಅರಿತು ಕಾಮಗಾರಿ ನಡೆಸಲಾಗಿದೆ. ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.
ಗ್ರಾಪಂ ಅಧ್ಯೆ ಚನ್ನವ್ವ ಕುಲಗೋಡ, ಬಸವರಾಜ ಪಟ್ಟಣ, ಗುತ್ತಿಗೆದಾರ ಬಿ.ಜಿ.ಜೋಗಿ, ಎಇಇ ಅನಿಲ ಮುರಗೋಡ, ಸಿ.ಬಿ.ಜಕ್ಕನ್ನವರ, ಶಿವಾನಂದ ನಿಲ್ಲಪ್ಪನ್ನವರ, ಸಿದ್ದಪ್ಪ ಕೂಲಗೂಡ, ವೀರಭದ್ರ ಚಚಡಿ, ವಿಠ್ಠಲ ಕಾಗಿ, ಕೀರಪ್ಪ ಕರೆನ್ನವರ, ಚಿದಾನಂದ ಪೂಜೇರಿ, ಸವಿತಾ ಬಡ್ಡಿವಡ್ಡರ, ಎಂ.ಬಿ.ಮಾಳಗಿ ಇತರರಿದ್ದರು.