ಗ್ರಾಮೀಣ ಆಟಗಳಿಗೆ ಸಿಗಲಿ ಆದ್ಯತೆ

20 dvd 02
ದೇವದುರ್ಗ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ 16 ವರ್ಷದೊಳಗಿನ ಬಾಲಕ, ಬಾಲಕಿಯರ ಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಆಟಗಾರರ ಜತೆ ಪ್ರಮುಖರಾದ ರಂಗನಾಥ ದೇವಸ್ಥಾನದ ಪೂಜಾರಿ ಕೆಂಚಣ್ಣ ತಾತ ಪೂಜಾರಿ, ಪುರಸಭೆ ಮಾಜಿ ಅಧ್ಯಕ್ಷ ಶರಣಗೌಡ, ರವಿ ಪಾಟೀಲ್, ನಿಖಿಲ್ ಖೇಣೇದ್, ಮಾನಪ್ಪ ಕರಿಗುಡ್ಡ ಇತರರಿದ್ದರು.
Published on

ದೇವದುರ್ಗ: ಆಧುನಿಕ ಭರಾಟೆಯಲ್ಲಿ ಗ್ರಾಮೀಣ ಕ್ರೀಡೆಗಳು ನಶಿಸುತ್ತಿರುವುದು ಕಳವಳಕಾರಿ. ಕಬಡ್ಡಿ ಸೇರಿ ಗ್ರಾಮೀಣ ಭಾಗದ ಕ್ರೀಡೆಗಳಿಗೆ ಪ್ರೋತ್ಸಾಹ ಹಾಗೂ ಆದ್ಯತೆ ನೀಡಬೇಕಿದೆ ಎಂದು ಶ್ರೀ ಜಹೀರುದ್ದೀನ್ ಪಾಷಾ ದರ್ಗಾದ ಮುಖ್ಯಸ್ಥ ಜಹೀರುದ್ದೀನ್ ಪಾಷಾ ಖಾದ್ರಿ ತಾತ ಹೇಳಿದರು.

ಪಟ್ಟಣದ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ 16 ವರ್ಷದೊಳಗಿನ ಬಾಲಕ ಹಾಗೂ ಬಾಲಕಿಯರ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯ ಉದ್ಘಾಟನೆ ಸಮಾರಂಭದ ಸಾನ್ನಿಧ್ಯ ವಹಿಸಿ ಭಾನುವಾರ ಮಾತನಾಡಿದರು.

ಸಾಮಾಜಿಕ ಜಾಲತಾಣ, ಟಿವಿ ಹಾಗೂ ಮೊಬೈಲ್ ಹಾವಳಿಯಿಂದ ಯುವಜನರಲ್ಲಿ ಕ್ರೀಡಾ ಆಸಕ್ತಿ ಕಡಿಮೆಯಾಗುತ್ತದೆ. ದೇಸಿಯ ಕ್ರೀಡೆಗಳಾದ ಕಬ್ಬಡಿ, ಖೋಖೋ ಸೇರಿ ಗ್ರಾಮೀಣ ಸೊಗಡಿನ ಆಟಗಳಿಗೆ ಆದ್ಯತೆ ನೀಡಬೇಕು. ಪಟ್ಟಣದಲ್ಲಿ ಕಬಡ್ಡಿ ಪಂದ್ಯ ಆಯೋಜಿಸಿದ್ದು ಉತ್ತಮ ಬೆಳವಣಿಗೆ. ಕ್ರೀಡಾಪಟುಗಳು ಕ್ರೀಡಾ ಸ್ಫೂರ್ತಿಯಿಂದ ಪಂದ್ಯಾವಳಿಯಲ್ಲಿ ಭಾಗವಹಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net