ಗ್ರಾಮಾಭಿವೃದ್ಧಿಗೆ ಪಂಚಾಯಿತಿ ಪಾತ್ರ ಪ್ರಮುಖ

2
ಅರಟಾಳ ಸಮೀಪದ ಬಾಡಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಅಥಣಿ ನರೇಗಾ ಸಹಾಯಕ ನಿರ್ದೇಶಕ ಎಂ.ಆರ್.ಕೋತ್ವಾಲ್ ಮಾತನಾಡಿದರು. ಅನ್ನಪೂರ್ಣಾ ಮುಧೋಳ, ಆನಂದ ಗಿರಿಜಾಗೋಳ, ಶಿವಾನಂದ ಸಾಗಾಂವ ಇತರರಿದ್ದರು.
Published on

ಅರಟಾಳ: ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯಿತಿ ಪಾತ್ರ ಮುಖ್ಯವಾಗಿದೆ. ವೈಯಕ್ತಿಕ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಗ್ರಾಮದಲ್ಲಿ 55 ಎಕರೆ ಅರಣ್ಯ ಪ್ರದೇಶದಲ್ಲಿ ಹೊಸ ಕೆರೆ ನಿರ್ಮಾಣವಾಗುತ್ತಿದ್ದು, ರೈತರಿಗೆ ಉಪಯೋಗವಾಗಲಿದೆ ಎಂದು ಅಥಣಿ ನರೇಗಾ ಸಹಾಯಕ ನಿರ್ದೇಶಕ ಎಂ.ಆರ್.ಕೋತ್ವಾಲ್ ಹೇಳಿದರು.

ಸಮೀಪದ ಬಾಡಗಿ ಕಲ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮ ಸಭೆ ಹಾಗೂ ವೈಯಕ್ತಿಕ ಕಾಮಗಾರಿಗಳ ಅಭಿಯಾನದಲ್ಲಿ ಮಾತನಾಡಿ, ಗ್ರಾಪಂ ವತಿಯಿಂದ ಮಂಜೂರಾದ ದನದ ಕೊಟ್ಟಿಗೆ, ವರ್ಕ್‌ಕಾರ್ಡ್ ವಿತರಿಸಲಾಗಿದೆ. ಫಲಾನುಭವಿಗಳು ದನದ ಕೊಟ್ಟಿಗೆ, ಶೌಚಗೃಹ, ಇಂಗುಗುಂಡಿ ಮಾಡಿಕೊಳ್ಳಬೇಕು ಎಂದರು.

ಪಿಡಿಒ ಎ.ಜಿ.ಎಡಕೆ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಾ ಮುಧೋಳ, ಕಾರ್ಯದರ್ಶಿ ಆನಂದ ಗಿರಿಜಾಗೋಳ, ಅಥಣಿ ತಾಪಂ ಸಿಬ್ಬಂದ್ದಿ ಶಿವಾನಂದ ಸಾಗಾಂವ, ಶಿವಾನಂದ ನೇಮಗೌಡ, ಚನ್ನಪ್ಪ ಕಾಗವಾಡ, ರೇವಪ್ಪ ತೇಲಿ, ಏಕನಾಥ ಕಾಂಬಳೆ, ಮಹಾದೇವ ಡಂಗಿ, ಗ್ರಾಪಂ ಸದಸ್ಯರಾದ ಸಿದ್ದು ಹಳ್ಳಿ, ಜಯಶ್ರೀ ಡಂಗಿ, ಸರಸ್ವತಿ ಕಾಂಬಳೆ, ಭಾರತಿ ನಾಯಿಕ, ಗಂಗವ್ವ ಅರ್ಜುಣಗಿ, ಮಹಾದೇವಿ ಪಾಟೀಲ, ಲಕ್ಷ್ಮೀಬಾಯಿ ಮಮದಾಪುರ, ಡಾ.ಬಸವರಾಜ ಕೆಂಚಗೊಂಡ, ಪುಂಡಲೀಕ ಹಿರೇಕುರಬರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net