ರಸ್ತೆ ವಿಸ್ತರಣೆಗೆ ಅಳತೆ ಪಡೆದ ಪುರಸಭೆ

kampli Road work
ಕಂಪ್ಲಿಯ ಹಳೆಯ ಪೊಲೀಸ್ ಸ್ಟೇಷನ್ ಬಳಿ ರಸ್ತೆ ವಿಸ್ತರಣೆಗಾಗಿ ಅಳತೆ ಮಾಡುತ್ತಿರುವ ಪುರಸಭೆ ಸಿಬ್ಬಂದಿ. ಮುಖ್ಯಾಧಿಕಾರಿ ಕೆ.ದುರುಗಣ್ಣ, ಜೆಇ ಮೇಘನಾ ಇದ್ದಾರೆ.
Published on

ಕಂಪ್ಲಿ: ಇಲ್ಲಿನ ನಡುವಲ ಮಸೀದಿಯಿಂದ ಜೋಗಿಕಾಲುವೆತನಕ ರಸ್ತೆ ವಿಸ್ತರಣೆಗಾಗಿ ಪುರಸಭೆ ಸಿಬ್ಬಂದಿ ಸೋಮವಾರ ರಸ್ತೆ ಅಳತೆ ಮಾಡಿದರು.

ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ನಡುವಲ ಮಸೀದಿಯಿಂದ ಜೋಗಿ ಕಾಲುವೆತನಕ ರಸ್ತೆ ವಿಸ್ತರಣೆ ಮತ್ತು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಈ ಹಿನ್ನಲೆಯಲ್ಲಿ ರಸ್ತೆ ಮಧ್ಯದ ಭಾಗ ಗುರುತಿಸಲಾಗುತ್ತಿದೆ. ಪೋಲೀಸ್ ಠಾಣೆತನಕ ಅಗಲವಾದ ರಸ್ತೆ ಮುಂದೆ ಕಿರಿದಾಗಿ ಸಾಗಿದೆ. ಕೆಲವೆಡೆ 20ಅಡಿ, ಕೆಲವೆಡೆ 25ಅಡಿ, ಇನ್ನೂ ಕೆಲವೆಡೆ ಕಡಿಮೆ ಅಳತೆಯಲ್ಲಿದೆ.

ಮನೆಗಳ ಅಳತೆಯ ದಾಖಲೆ ಪರಿಶೀಲಿಸಿ ರಸ್ತೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುವುದು. ರಸ್ತೆ ಅಭಿವೃದ್ಧಿ ಕಾಮಗಾರಿಗೂ ಮುನ್ನ ಜನರ ಸಭೆ ಕರೆದು ಚರ್ಚಿಸಿ, ರಸ್ತೆ ವಿಸ್ತರಣೆ ಅಳತೆ ನಿರ್ಧರಿಸಲಾಗುವುದು ಎಂದರು.

ಜೆಇ ಮೇಘನಾ ಸೇರಿ ಸಿಬ್ಬಂದಿ ಇದ್ದರು. 2009ರಲ್ಲಿ ಪುರಸಭೆಯಿಂದ ನಡುವಲ ಮಸೀದಿತನಕ ಮಾತ್ರ ರಸ್ತೆ ವಿಸ್ತರಿಸಿ ಕೈಬಿಟ್ಟ ಉಳಿದ ಕಾಮಗಾರಿಯನ್ನು ಈಗ ಕೈಗೆತ್ತಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net