ಸಂಶೋಧನೆಗೆ ಕೆಮಿಸ್ಟ್ರಿ ಮೂಲ

6Jaggu6
ಕೆಎಲ್‌ಇ ರಾಜಾ ಲಖಮಗೌಡ ವಿಜ್ಞಾನ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ವಿವಿಧ ಕೃತಿಗಳು ಬಿಡುಗಡೆಗೊಳಿಸಲಾಯಿತು. ಡಾ.ಪ್ರವೀಣ ಎ. ಘೋರ್ಪಡೆ, ಡಾ. ಲತಾ ಎಂ.ಎಸ್. ಇತರರಿದ್ದರು.
Published on

ಬೆಳಗಾವಿ: ರಸಾಯನಶಾಸ್ತ್ರವು ವಿವಿಧ ಸಂಶೋಧನಾ ಕಾರ್ಯಗಳಿಗೆ ಸಂಪನ್ಮೂಲವಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಎಂ.ಎಸ್. ಶೇಷಗಿರಿ ಇಂಜಿನಿಯರಿಂಗ್ ಕಾಲೇಜಿನ ಡೀನ್ ಡಾ. ಪ್ರವೀಣ ಎ. ಘೋರ್ಪಡೆ ಹೇಳಿದರು.

ಕೆಎಲ್‌ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದ ರಾಸಾಯನಶಾಸ್ತ್ರ ವಿಭಾಗದಿಂದ ಕಾಲೇಜಿನ ಸಿ.ವಿ. ರಾಮನ್ ಸಭಾಂಗಣದಲ್ಲಿ ‘ಪರಿಸರ ಅಭಿಯಾಂತ್ರಿಕದಲ್ಲಿ ಮೂಲ ವಿಜ್ಞಾನದ ಮಹತ್ವ’ ಎಂಬ ವಿಷಯದ ಕುರಿತು ಈಚೆಗೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ರಾಸಾಯನಶಾಸ್ತ್ರ ಬಹಳ ಮಹತ್ವ ಪಡೆದಿದೆ. ವಿದ್ಯಾರ್ಥಿಗಳು ಮೂಲ ರಾಸಾಯನಶಾಸ್ತ್ರದ ಆಳವಾದ ಜ್ಞಾನ ಪಡೆಯಬೇಕು. ಅಂದಾಗ ಮಾತ್ರ ಉನ್ನತ ಅಧ್ಯಯನಕ್ಕೆ ಸಹಕಾರಿಯಾಗುತ್ತದೆ ಎಂದರು.

ಮಹಾವಿದ್ಯಾಲಯದ ರಾಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಲತಾ ಎಂ.ಎಸ್. ಅವರು ರಚಿಸಿರುವ ‘ಫಂಡಮೆಂಟಲ್ಸ್ ಆಫ್ ಕೆಮೆಸ್ಟ್ರಿ, ಬೇಸಿಕ್ ಕಾನ್ಸ್ಟ್ ಆಫ್ ಕೆಮೆಸ್ಟ್ರಿ ಫಾರ್ ಇಂಜಿನಿಯರಿಂಗ್ ಸ್ಟುಡೆಂಟ್ಸ್, ಪ್ರಿನ್ಸಿಪಲ್ಸ್ ಆಫ್ ಜನರಲ್ ಕೆಮೆಸ್ಟ್ರಿ ಹಾಗೂ ರಾಸಾಯನಶಾಸ್ತ್ರ ವಿಭಾಗದ ಮತ್ತೋರ್ವ ಸಹಾಯಕ ಪ್ರಾಧ್ಯಾಪಕಿ ಡಾ. ಕೀರ್ತಿ ಬ್ಯಾಡಗಿ ಮತ್ತು ಡಾ. ಲತಾ ಎಂ.ಎಸ್. ಸಂಯುಕ್ತವಾಗಿ ರಚಿಸಿರುವ ಕಾನ್ಸಿಸ್ ಜನರಲ್ ಕೆಮೆಸ್ಟ್ರಿ ಕೃತಿಗಳ ಲೋಕಾರ್ಪಣೆ ಮಾಡಲಾಯಿತು.

ಪ್ರಾಚಾರ್ಯೆ ಡಾ. ಜೆ.ಎಸ್. ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ರಾಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಬಿ.ಜಿ. ಬೇವಿನಕಟ್ಟಿ ಇತರರಿದ್ದರು. ಎಸ್.ಡಿ. ಗೋರಿನಾಯಕ ಸ್ವಾಗತಿಸಿದರು. ಕೆಮಿಕಲ್ ಸೊಸೈಟಿ ಅಧ್ಯಕ್ಷೆ ಪವಿತ್ರಾ ಸಮಾಜೆ ಪರಿಚಯಿಸಿದರು. ರೋಜ್ ಮೊಂಟೆರಿಯೊ ನಿರೂಪಿಸಿದರು. ನೀಲಾ ಯರಗಟ್ಟಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net