ಮಳೆಗೆ ಈರುಳ್ಳಿ ಬೆಳೆ ಜಲಾವೃತ- ಭತ್ತ ನೆಲಸಮ

12 HDL 01
ಹೂವಿನಹಡಗಲಿ ತಾಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಸೋವೆನಹಳ್ಳಿ ಗ್ರಾಮದಲ್ಲಿನ ಭತ್ತದ ಬೆಳೆ ನೆಲಕಚ್ಚಿರುವುದು.
Published on

ಹೂವಿನಹಡಗಲಿ: ತಾಲೂಕಿನಲ್ಲಿ ಶುಕ್ರವಾರ ಸುರಿದ ಮಳೆಯಿಂದ ರೈತರು ಬೆಳೆದಿದ್ದ ನೂರಾರು ಪ್ರದೇಶದ ಭತ್ತ ಹಾಗೂ ಈರುಳ್ಳಿ ಬೆಳೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.

ಶುಕ್ರವಾರ ಬೆಳಗ್ಗೆಯಿಂದ ಆರಂಭವಾದ ಮಳೆ ಅಲ್ಪಪ್ರಮಾಣದ ಬಿಡುವು ಬಿಟ್ಟು ಮಧ್ಯರಾತ್ರಿಯವರೆಗೂ ಸುರಿದಿದೆ. ಉತ್ತಂಗಿ ಗ್ರಾಮದ ಸುತ್ತಲಿನ ಪ್ರದೇಶದ ಈರುಳ್ಳಿ ಬೆಳೆ ಸಂಪೂರ್ಣ ಜಲಾವೃತಗೊಂಡಿದೆ.

ತಾಲೂಕಿನ ಸೋವೆನಹಳ್ಳಿ, ಬ್ಯಾಲಹುಣ್ಸಿ, ಮಕರಬ್ಬಿ ಸೇರಿದಂತೆ ನದಿ ತೀರ ಪ್ರದೇಶದಲ್ಲಿನ ಭತ್ತದ ಬೆಳೆಗಳಲ್ಲಿ ಹೆಚ್ಚಿನ ಪ್ರಮಾಣದ ನೀರು ನಿಂತು ಭತ್ತ ನೆಲಕಚ್ಚಿದೆ. ತಾಲೂಕಿನಲ್ಲಿ ಶೇ.16.7 ಮಿ.ಮೀ ಮಳೆ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net