ಮನಶುದ್ಧಿಗೆ ಮಹಾತ್ಮರ ವಚನ ಪಾಲಿಸಲಿ

2UK12
Published on

ಉಳ್ಳಾಗಡ್ಡಿ-ಖಾನಾಪುರ: ಕಲುಷಿತ ಮನಸ್ಸು ಶುದ್ಧವಾಗಬೇಕಾದರೆ ಮಹಾತ್ಮರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಘೊಡಗೇರಿಯ ಶ್ರೀ ಶಿವಾನಂದ ಮಠದ ಮಲ್ಲಯ್ಯ ಶ್ರೀಗಳು ಹೇಳಿದರು.

ಪರಕನಹಟ್ಟಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಜಾತ್ರಾ ಮಹೋತ್ಸವದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ತಂತ್ರಜ್ಞಾನ ಯುಗದಲ್ಲಿ ಬದುಕುತ್ತಿದ್ದರೂ, ಮಂತ್ರ-ಮಠವೂ ಮನಶುದ್ದಿಗೆ ಅಗತ್ಯ ಎಂದರು. ಚಿಕ್ಕಲದಿನ್ನಿಯ ಅದಶ್ಯಾನಂದ ಶ್ರೀಗಳು ನೇತೃತ್ವ ವಹಿಸಿದ್ದರು. ಶಿಕ್ಷಕರಾದ ಶ್ಯಾಮರಾವ ಕಿತ್ತೂರ, ಮಲ್ಲಪ್ಪ ಪೈರಾಶಿ, ಪ್ರಕಾಶ ಬಡೇಸ, ಪಿಡಿಒ ರಾಜು ಬೆಡಸೂರಿ, ಶರಣರಾದ ಬಾಳಪ್ಪ ಈರನಟ್ಟಿ ಇದ್ದರು.

ಬಸಯ್ಯ ಹಿರೇಮಠ ಸ್ವಾಗತಿಸಿ, ನಿರೂಪಿಸಿದರು. ಬೆಳಗ್ಗೆ ಅಭಿಷೇಕ, ಗೀತಾಪಾರಾಯಣ ನಡೆಯಿತು. ಹೋಳಿಗೆಯ ಮಹಾಪ್ರಸಾದ ಏರ್ಪಡಿಸಲಾಗಿತ್ತು. ಶ್ರೀ ಸಿದ್ಧಾರೂಢರ ಮಹಾರಥೋತ್ಸವವು ವಿವಿಧ ವಾದ್ಯಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net