

ಕನಕಗಿರಿ: ಕನಕಗಿರಿ ತಾಲೂಕು ವ್ಯಾಪ್ತಿಯ ಹುಲಿಹೈದರ್, ವರ್ನಖೇಡ ಭಾಗದಲ್ಲಿ ರೈತರು ಅಳವಡಿಸಿರುವ ಪಂಪ್‌ಸೆಟ್‌ಗಳಿಗೆ ನಿರಂತರ ತ್ರಿಫೇಸ್ ವಿದ್ಯುತ್ ನೀಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜೆಸ್ಕಾಂ ಶಾಖಾಧಿಕಾರಿ ಆನಂದ್‌ಗೆ ಬುಧವಾರ ಮನವಿ ಸಲ್ಲಿಸಲಾಯಿತು.
ರಾಜ್ಯ ರೈತ ಸಂಘದ ಅಧ್ಯಕ್ಷ ಶರಣಪ್ಪ ಗದ್ದಿ ಮಾತನಾಡಿ, ಮುಂಗಾರು ಮಳೆ ಆಗದಿರುವುದರಿಂದ ಬಿತ್ತನೆ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ನೀರಾವರಿ ನಂಬಿಕೊಂಡಿರುವ ರೈತರು ಸೂರ್ಯಕಾಂತಿ, ಹತ್ತಿ, ಟೊಮ್ಯಾಟೋ ಬೆಳೆಯಲು ಮುಂದಾಗಿದ್ದಾರೆ. ಆದರೆ, ಕನಕಗಿರಿ ತಾಲೂಕು ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಪೂರೈಕೆಗೆ ಬೇಜವಾಬ್ದಾರಿತನ ತೋರುತ್ತಿದ್ದಾರೆ. ನಿಯಮದ ಪ್ರಕಾರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ ಹಗಲು ಹೊತ್ತಿನಲ್ಲಿ 7 ಗಂಟೆಗಳ ಕಾಲ ವಿದ್ಯುತ್ ದೊರೆಯುತ್ತಿಲ್ಲ.
ಏಳು ಗಂಟೆಗಳ ಕಾಲ ನೀಡುವ ವಿದ್ಯುತ್‌ನಲ್ಲಿ 8ರಿಂದ 10 ಬಾರಿ ವಿದ್ಯುತ್ ಕಟ್ ಮಾಡುತ್ತಿದ್ದು, ಬೆಳೆಗಳಿಗೆ ನೀರು ಹರಿಸಲು ಸಮಸ್ಯೆಯಾಗಿದೆ. ಇದರಿಂದ ಕೆಲ ರೈತರು ರೋಸಿ ಹೋಗಿದ್ದು, ಕೃಷಿಯನ್ನೇ ಕೈ ಚೆಲ್ಲಿ ಕುಳಿತಿದ್ದಾರೆ. ಇನ್ನು ಪದೇ ಪದೆ ಕರೆಂಟ್ ತೆಗೆಯುವುದರಿಂದ ಮೋಟಾರುಗಳು ಹಾಳಾಗುತ್ತಿವೆ. ಸರಿಪಡಿಸಲು ಸಾವಿರಾರು ರೂ. ವ್ಯಯಿಸಬೇಕಾಗಿದೆ. ಈ ಸಮಸ್ಯೆ ಮುಂದುವರಿದರೆ ಜೆಸ್ಕಾಂ ಕಚೇರಿ ಮುಂದೆ ಸತ್ಯಾಗ್ರಹ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಗ್ರಾಪಂ ಸದಸ್ಯ ಜಗದೀಶಪ್ಪ ಗದ್ದಿ, ಪ್ರಮುಖರಾದ ಮೌಲಾಹುಸೇನ್, ಶ್ಯಾಮೀದ್‌ಸಾಬ್ ಕಲ್ಲೂರು, ಇಮಾಮ್‌ಸಾಹೇಬ್ , ಮೈಬೂಬ್‌ಸಾಬ್ ಗಂಗನಾಳ, ಮೈಬೂಬ್‌ಸಾಬ್ ದರೋಜಿ, ಯಂಕಪ್ಪ ಗದ್ದಿ, ಮಕ್ಬಲ್‌ಸಾಬ್ ಇತರರಿದ್ದರು.