

ಬೈಲಹೊಂಗಲ: ಜನರ ಸೇವೆ ಮಾಡಲು ರೋಟರಿ ಸಂಸ್ಥೆ ಉತ್ತಮ ವೇದಿಕೆಯಾಗಿದ್ದು, ಸಮಸ್ಯಗಳಿಗೆ ಸ್ಪಂದಿಸಿ ಪರಿಹಾರ ನೀಡಲು ಪದಾಧಿಕಾರಿಗಳು ಪ್ರಯತ್ನಿಸಬೇಕೆಂದು ರೋಟರಿ ಗವರ್ನರ್ ಅರುಣ ಭಂಡಾರೆ ಹೇಳಿದರು.
ಪಟ್ಟಣದ ಹೊಸೂರ ರಸ್ತೆಯಲ್ಲಿನ ರೋಟರಿ ಭವನದಲ್ಲಿ ಸೊಮವಾರ ಜರುಗಿದ ರೋಟರಿ ಕ್ಲಬ್ ಹಾಗೂ ಇನ್ನರವ್ಹೀಲ್ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಸ್ಥ$್ಯ ಸಮಾಜ ನಿರ್ಮಾಣ ಜತೆ ಅಸಹಾಯಕ ಜನರಿಗೆ ರೋಟರಿ ಸಂಸ್ಥೆ ಸದಾ ಬೆನ್ನಲಬಾಗಿ ನಿಂತಿದೆ ಎಂದರು.
ರೋಟರಿ ಕ್ಲಬ್ ಹಾಗೂ ಇನ್ನರವ್ಹೀಲ್ ಸಂಸ್ಥೆಗಳ ನೂತನ ಅಧ್ಯರಾದ ಡಾ.ಮಹಾಂತೇಶ ಕಳ್ಳಿಬಡ್ಡಿ, ವಿಜಯಾ ಕಳ್ಳಿಬಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಪದಾಧಿಕಾರಿಗಳಿಗೆ ರೋಟರಿ ಮಾಜಿ ಅಧ್ಯ ಮಹಾಂತೇಶ ಜಿಗಜಿನ್ನಿ ಹಾಗೂ ಇನ್ನರವ್ಹೀಲ್ ಮಾಜಿ ಅಧ್ಯೆ ಸುಮಂಗಲಾ ಜಿಗಜಿನ್ನಿ ಅವರು ನೂತನ ಅಧ್ಯರಿಗೆ ಅಧಿಕಾರ ಹಸ್ತಾಂತರಿಸಿದರು.
ಜಿಲ್ಲಾ ಇನರವ್ಹೀಲ್ ಗವರ್ನರ್ ಶಾಲಿನಿ ಚೌಗಲೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ರೋಟರಿ ಉಪಾಧ್ಯ ಅನಿಲ ಚಡಚ್ಯಾಳ, ಕಾರ್ಯದರ್ಶಿ ಆನಂದ ವಾಲಿ, ಜಂಟಿ ಕಾರ್ಯದರ್ಶಿ ಅಯ್ಯನಗೌಡಾ ಪಾಟೀಲ, ಮಹೇಶ ಬೆಲ್ಲದ, ವಿಜಯಕುಮಾರ ಪಾಟೀಲ, ಅರ್ಜುನ ಕಲಕುಟಕರ, ಗೌತಮ ಇಂಚಲ, ಡಾ.ಸಾಗರ ಕುಲಕರ್ಣಿ, ಶಿವಶಂಕರ ತಟವಾಟಿ, ಯುವ ಮುಖಂಡ ಬಸವರಾಜ ಕೌಜಲಗಿ, ಡಾ.ಚಂದ್ರಶೇಖರ ಗಣಾಚಾರಿ, ಡಾ.ಮಹಾಂತೇಶ ಗದಗ, ಡಾ.ನಾಗರಾಜ ಹಲಸಗಿ, ಪ್ರಮೋದಕುಮಾರ ವಕ್ಕುಂದಮಠ, ನಾಗೇಶ ಮರಕುಂಬಿ, ಇನ್ನರವಿಲ್ನ ಕಾರ್ಯದರ್ಶಿ ಡಾ.ಗೀತಾ ಪುರಾಣಿಕಮಠ, ಖಜಾಂಚಿ ಸವಿತಾ ಉಡುಪಿ, ವಿಶಾಲಾ ತಟವಾಟಿ, ಶೋಭಾ ಕುಲಕರ್ಣಿ, ಉಶಾ ಬೆಲ್ಲದ, ದೀಪಾ ಹಲಸಗಿ, ಭಾರತಿ ತಟವಾಟಿ, ನೇಹಾ ಘಾನೇಕರ, ಪ್ರೀತಿ ಪಾಟೀಲ ಮುಂತಾದವರು ಉಪಸ್ಥಿತರಿದ್ದರು. ರೋಟರಿ ಹಾಗೂ ಇನ್ನರವಿಲ್ನ್ ಮಾಜಿ ಹಾಗೂ ನೂತನ ಪದಾಕಾರಿಗಳು ಪಾಲ್ಗೊಂಡಿದ್ದರು. ಡಾ.ಬಸವರಾಜ ಮಹಾಂತಶೆಟ್ಟಿ ಸ್ವಾಗತಿಸಿದರು. ಎಲ್ಐಸಿ ಅಧಿಕಾರಿ ಸಂಜಯ ಮಹಾಲೆ ನಿರೂಪಿಸಿದರು. ರೋಟರಿಯನ್ ಸುಜಾತಾ ಮಹಾಲೆ ವಂದಿಸಿದರು.