ಲಾಭದತ್ತ ವೀರಶೈವ ಲಿಂಗಾಯತ ಸಹಕಾರ ಸಂಘ

25 ಎಸ್ಕೆಪಿ 1b
ವಿಶ್ವಬಂಧು ವೀರಶೈವ ಲಿಂಗಾಯತ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಅಧ್ಯಕ್ಷ ಸಿ.ಕೊಟ್ರೇಶ್ವರಪ್ಪ ಉದ್ಘಾಟಿಸಿದರು. ರಮೇಶ್, ಈರೇಶ್, ಅಶ್ವಿನ್, ಪರಮೇಶ್ವರಪ್ಪ, ಶಿವಾಜಿಗೌಡ, ವಸಂತಕುಮಾರ, ಜ್ಯೋತಿ ರಮೇಶ್, ಸುಧಾ ರಾಜಶೇಖರ್, ಅಭಿಲಾಷ್, ಸುಮಾ ಇತರರಿದ್ದರು.
Published on

ಶಿಕಾರಿಪುರ: ವಿಶ್ವ ಬಂಧು ವೀರಶೈವ ಲಿಂಗಾಯತ ಸೌಹಾರ್ದ ಸಹಕಾರ ಸಂಘ 15.258 ಲಕ್ಷ ರೂ. ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೊಟ್ರೇಶ್ವರಪ್ಪ ತಿಳಿಸಿದರು.

ನಗರದ ಶ್ರೀ ಭ್ರಾಂತೇಶ ಸಮುದಾಯ ಭವನದಲ್ಲಿ ವಿಶ್ವ ಬಂಧು ವೀರಶೈವ ಲಿಂಗಾಯತ ಸೌಹಾರ್ದ ಸಹಕಾರದಿಂದ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘವು ಎಲ್ಲರ ಸಹಕಾರದಿಂದ ಯಶಸ್ಸಿನತ್ತ ಸಾಗುತ್ತಿದೆ. ೪ನೇ ವರ್ಷಕ್ಕೆ ಕಾಲಿಟ್ಟಿರುವ ಸಂಘದಲ್ಲಿ 1,181 ಜನ ಷೇರುದಾರರಿದ್ದಾರೆ ಎಂದು ತಿಳಿಸಿದರು.
ಷೇರುದಾರರ 27 ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಜಿ¯್ಲÁ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಇಬ್ಬರು ಷೇರುದಾರ ಶಿಕ್ಷಕರನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ರಮೇಶ್, ನಿರ್ದೇಶಕ ಎನ್.ವಿ.ಈರೇಶ್, ಅಶ್ವಿನ್, ಪರಮೇಶ್ವರಪ್ಪ, ಪ್ರಭುಲಿಂಗಪ್ಪ, ಕುಮಾರಸ್ವಾಮಿ ಹಿರೇಮಠ, ಶಿವಾಜಿಗೌಡ, ವಸಂತಕುಮಾರ, ಜ್ಯೋತಿ ರಮೇಶ್, ಸುಧಾ ರಾಜಶೇಖರ್, ಪಿಗ್ಮಿ ಸಂಗ್ರಾಹಕ ಅಭಿಲಾಷ್, ಕಾರ್ಯದರ್ಶಿ ಸುಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net