ಲಾಭದತ್ತ ಆದಿನಾಥ ಸೊಸೈಟಿ

25Uk2
Published on

ಉಳ್ಳಾಗಡ್ಡಿ-ಖಾನಾಪುರ: ಹೆಬ್ಬಾಳದ ಶ್ರೀ ಆದಿನಾಥ ಪತ್ತಿನ ಸೌಹಾರ್ದ ಸಹಕಾರ ಸಂಘ ಪ್ರಸ್ತುತ ವರ್ಷದಲ್ಲಿ ೭೨,೪೬,೫೪೯ ರೂ. ಲಾಭ ಗಳಿಸಿ, ಸದಸ್ಯರಿಗೆ ಶೇ. ೨೫ ರಷ್ಟು ಲಾಭಾಂಶ ವಿತರಿಸಿದೆ ಎಂದು ಸಂಘದ ಅಧ್ಯಕ ಭರಮಗೌಡ ಪಾಟೀಲ ಹೇಳಿದರು.

ಸಮೀಪದ ಹೆಬ್ಬಾಳ ಗ್ರಾಮದ ಶ್ರೀ ಆದಿನಾಥ ಪತ್ತಿನ ಸಹಕಾರ ಸಂಘದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ೨೭ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಮಾತನಾಡಿ, ೫,೮೫೯ ಸದಸ್ಯರನ್ನು ಹೊಂದಿದ ಸಹಕಾರ ಸಂಘ ೧೩೮,೫೭,೮೧,೩೭೬ ರೂ. ವ್ಯವಹಾರ ನಡೆಸಿದೆ. ಮಸರಗುಪ್ಪಿ ಶಾಖೆ ಕಟ್ಟಡ ಪ್ರಾರಂಭಿಸಿದ್ದು, ಪ್ರಧಾನ ಕಚೇರಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ಪಡೆದಿದೆ ಎಂದರು.

ಸಂಘದ ಉಪಾಧ್ಯಕ್ಷ ದಾದಾಗೌಡ ಪಾಟೀಲ, ನಿರ್ದೇಶಕರಾದ ವಿದ್ಯಾಧರ ಹರಾರಿ, ಡಾ.ವೃಷಭ ಪಾಟೀಲ, ಪ್ರಶಾಂತ ಪಾಟೀಲ, ಜಯಪಾಲ ಹೊನ್ನನ್ನವರ, ವಿಜಯ ಬಾಳಿಕಾಯಿ, ಮಹೇಶ ಸದಲಗಿ, ಸಂದೀಪ ಪಾಟೀಲ, ಬಸ್ತವಾಡ ಶಾಖೆ ಅಧ್ಯಕ್ಷ ನೇಮಣ್ಣ ಮಗದುಮ್ಮ, ಮಸರಗುಪ್ಪಿ ಶಾಖೆ ಅಧ್ಯಕ್ಷ ಶ್ರೀಮಂತ ಚಿಕ್ಕೋಡಿ, ಮಾರುತಿ ರ‍್ಯಾಯಿ, ವಿಫುಲ ಬಾಳಿಕಾಯಿ, ಶಾಂತಿನಾಥ ಪಾಟೀಲ, ಪಿ.ಐ.ಘಸ್ತಿ, ಮುಖ್ಯಶಾಖೆ ವ್ಯವಸ್ಥಾಪಕ ಬಿ.ಟಿ.ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net