ಸೋಂಕಿತರ ಸಂಖ್ಯೆ 121ಕ್ಕೆ ಏರಿಕೆ

BIMS Hospital Belagavi 5 MAY 20
Published on

ಬೆಳಗಾವಿ: ಮಹಾರಾಷ್ಟ್ರದ ಮುಂಬೈನಿಂದ ಬೆಳಗಾವಿ ಜಿಲ್ಲೆಗೆ ಆಗಮಿಸಿದ್ದ ರಾಮದುರ್ಗ ತಾಲೂಕಿನ ಗ್ರಾಮವೊಂದರ 27 ವರ್ಷದ ಗರ್ಭಿಣಿ (ಪಿ-1814)ಗೆ ಕರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಶನಿವಾರ 121ಕ್ಕೆ ಏರಿಕೆಯಾಗಿದೆ.

ಸಂಬಂಧಿಕರ ಮದುವೆಗೆಂದು ಕುಟುಂಬದವರ ಜತೆ ಗರ್ಭಿಣಿ ಮುಂಬೈಗೆ ತೆರಳಿದ್ದರು. ಬಳಿಕ ಮೇ 17ರಂದು ಕುಟುಂಬ ಸಮೇತ ಮುಂಬೈನಿಂದ ಸ್ವಗ್ರಾಮಕ್ಕೆ ಆಗಮಿಸಿದ್ದರು. ಅವರೆಲ್ಲರನ್ನೂ ಆರೋಗ್ಯ ಅಧಿಕಾರಿಗಳು ರಾಮದುರ್ಗ ಪಟ್ಟಣದಲ್ಲಿರುವ ಸರ್ಕಾರಿ ವಸತಿ ನಿಲಯದಲ್ಲಿ ಕ್ವಾರಂಟೈನ್ ಮಾಡಿ, ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದೀಗ ಗರ್ಭಿಣಿಯಲ್ಲಿ ಸೋಂಕು ದೃಢಪಟ್ಟಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

9,082 ಜನರ ಮೇಲೆ ನಿಗಾ: ಮಹಾರಾಷ್ಟ್ರದ ಮುಂಬೈ ಸೇರಿದಂತೆ ವಿವಿಧ ರಾಜ್ಯಗಳಿಂದ ಮತ್ತು ಬೆಂಗಳೂರು ನಗರದಿಂದ ಜಿಲ್ಲೆಗೆ ಆಗಮಿಸಿರುವ 9,082 ಜನರ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. 1,549 ಜನರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net