

ಬೋರಗಾಂವ: ಪಟ್ಟಣದಲ್ಲಿ ಹಸಿವುಮುಕ್ತ ಕರ್ನಾಟಕ ಯೋಜನೆಯಡಿ ಇಂದಿರಾ ಕ್ಯಾಂಟೀನ್ ಸ್ಥಾಪನೆಗೊಳ್ಳುತ್ತಿರುವುದು ಸಂತಸ ತಂದಿದೆ ಎಂದು ಮುಖ್ಯ ಅಧಿಕಾರಿ ಎಸ್.ಬಿ. ತೋಡಕರ ಹೇಳಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಮಾತನಾಡಿ, ವಾರದೊಳಗಾಗಿ ಇಂದಿರಾ ಕ್ಯಾಂಟೀನ್ ಕಾಮಗಾರಿ ಪೂರ್ಣಗೊಳ್ಳಲಿದೆ. ಸುತ್ತಮುತ್ತಲಿನ ಬಡಜನರ ಪಾಲಿಗೆ ಕ್ಯಾಂಟೀನ್ ವರದಾನವಾಗಲಿದೆ ಎಂದರು.
ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸದಸ್ಯರು ಕಾಮಗಾರಿ ಪರಿಶೀಲನೆ ನಡೆಸಿದರು. ಪಪಂ ಅಧ್ಯಕ್ಷ ಪಿಂಟು ಕಾಂಬಳೆ, ಉಪಾಧ್ಯಕ್ಷೆ ಭಾರತಿ ವಸವಾಡೆ, ಸದಸ್ಯರಾದ ಅಭಯಕುಮಾರ ಮಗದುಮ್ಮ, ತುಳಸಿದಾಸ ವಾಸವಾಡೆ, ಮಾಜಿ ಅಧ್ಯಕ್ಷ ಸಂಗಪ್ಪ ಐದಮಾಳೆ, ಕಂದಾಯ ನಿರೀಕ್ಷಕ ಸಂದೀಪ ವೈಂಗಡೆ, ಪ್ರಥಮ ದರ್ಜೆ ಸಹಾಯಕ ರಾಹುಲ ಗೂಡಯಿನಕರ, ದ್ವಿತೀಯ ದರ್ಜೆ ಸಹಾಯಕ ಪೋಪಟ ಕುರಳೆ, ವಿಜಯ ಚೌಗುಲಾ ಇತರರಿದ್ದರು.