

ಸಂಬರಗಿ: ಗ್ರಾಮೀಣ ಭಾಗದ ಬಡ ಕುಟುಂಬಗಳಿಗೆ ಪ್ರಧಾನಮಂತ್ರಿ ಆವಾಸ ಯೋಜನೆ ಸಹಕಾರಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಮಹದೇವ ಕೋರೆ ಹೇಳಿದರು.
ಸಮೀಪದ ಮದಭಾಂವಿ ಗ್ರಾಮದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 63 ಬಡ ಕುಟುಂಬಕ್ಕೆ ಮನೆಗಳ ಮಂಜೂರಾತಿ ಆದೇಶ ಪತ್ರ ಸೋಮವಾರ ವಿತರಿಸಿ ಮಾತನಾಡಿ, ಕೇಂದ್ರ ಸರ್ಕಾರ ರೈತರಿಗೆ ಜನಪರ ಯೋಜನೆ ರೂಪಿಸಿದೆ. ಪ್ರಧಾನಮಂತ್ರಿ ಆವಾಸ ಯೋಜನೆಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕುಟುಂಬಕ್ಕೆ 2ಲಕ್ಷ ರೂ. ಹಾಗೂ ಸಾಮಾನ್ಯ ಕುಟುಂಬಕ್ಕೆ 1.48 ಲಕ್ಷ ರೂ. ಲಾನುಭವಿಗಳಿಗೆ ನೀಡಲಾಗುವುದು ಎಂದು ತಿಳಿಸಿದರು.
ಗ್ರಾಪಂ ಉಪಾಧ್ಯಕ್ಷ ಸುಶ್ಮಿತಾ ನಿಲಜಗಿ, ಸದಸ್ಯರಾದ ಮಹೇಶ ಕೇಸ್ತೆ, ಸಂತೋಷ ಕಲ್ಲೂತಿ, ಗೋಪಾಲ ಅವಳೆ, ಗೋಪಾಲ ನೀವಲಗಿ, ಕೃಷ್ಣಾ ಶಿಂಧೆ, ಅಶೋಕ ಗಾಡಿವಡ್ಡರ, ದಾದಾ ಮೇತ್ರಿ, ಸಿದ್ದು ಪೂಜಾರಿ, ಪಿಡಿಒ ಸಂತೋಷ ಸನದಿ ಇತರರಿದ್ದರು. ಕಾರ್ಯದರ್ಶಿ ಉಸ್ಮಾನ ಮುಲ್ಲಾ ವಂದಿಸಿದರು.