ರಾಜಕಾರಣಿಗಳಿಗೆ ದೇವರು ಸದ್ಬುದ್ಧಿ ಕರುಣಿಸಲಿ

25MGKD1
ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗ ಮಹಾರಾಜರ ಬಹನ್ಮಠದಲ್ಲಿ ತೊಟ್ಟಿಲೋತ್ಸವ ಕಾರ್ಯಕ್ರಮ ಜರುಗಿತು. ಡಾ.ಮುರುಘರಾಜೇಂದ್ರ ಸ್ವಾಮೀಜಿ, ಮಾರುತಿ ಗೋಕಾಕ, ಅಣ್ಣಪ್ಪಗೌಡ ಪಾಟೀಲ, ರಾಯಗೌಡ ಕೇತಗೌಡರ, ಸೋಮು ಹೊರಟ್ಟಿ ಇತರರು ಇದ್ದರು.
Published on

ಮುಗಳಖೋಡ: ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ಆಚರಣೆಗಳನ್ನು ರಾಜಕಾರಣಕ್ಕೆ ಹೋಲಿಕೆ ಮಾಡುತ್ತಿರುವ ಎಲ್ಲ ರಾಜಕಾರಣಿಗಳಿಗೆ ದೇವರು ಸದ್ಬುದ್ಧಿ ಕರುಣಿಸಲಿ ಎಂದು ಮುಗಳಖೋಡ-ಜಿಡಗಾ ಮಠದ ಪೀಠಾಧ್ಯಕ್ಷ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಪಟ್ಟಣದ ಶ್ರೀ ಯಲ್ಲಾಲಿಂಗ ಮಹಾರಾಜರ ಬಹನ್ಮಠದಲ್ಲಿ ಜರುಗುತ್ತಿರುವ ಲಿಂ.ಯಲ್ಲಾಲಿಂಗ ಮಹಾರಾಜರ 38ನೇ ಪುಣ್ಯಸ್ಮರಣೋತ್ಸವದ ಮೊದಲ ದಿನವಾದ ಗುರುವಾರ ತೊಟ್ಟಿಲೋತ್ಸವ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಭಾರತ ವಿವಿಧ ಜಾತಿ, ಧರ್ಮ, ಪಂತಗಳನ್ನು ಒಳಗೊಂಡ ಭಾವೈಕ್ಯತೆಯ ತಾಣ. ಒಂದೊಂದು ಧರ್ಮದ ಆಚರಣೆಯನ್ನು ರಾಜಕೀಯಕ್ಕೆ ಹೋಲಿಕೆ ಮಾಡುವ ಕೀಳರಿಮೆಯ ರಾಜಕಾರಣಿಗಳು ವಿಶ್ವಶಾಂತಿಗಾಗಿ ಸನ್ನದ್ಧರಾಗಬೇಕೆ ಹೊರತು, ದೇಶವನ್ನು ಒಡಕು ಮಾಡುವ ಕುತಂತ್ರಿಗಳಾಗಬಾರದು ಎಂದರು. ಮುತ್ತೈದೆಯರಿಗೆ ಉಡಿತುಂಬಲಾಯಿತು. ಅಪ್ಪಾಜಿ ಸಂಗೀತ ಕಲಾ ಬಳಗದವರಿಂದ ಭಕ್ತಿಯ ಗಾನ ಸುಧೆ ಕಾರ್ಯಕ್ರಮ ಪ್ರಸ್ತುತವಾಯಿತು.

ಮಾರುತಿ ಗೋಕಾಕ, ಅಣ್ಣಪ್ಪಗೌಡ ಪಾಟೀಲ(ಕೋಳಿಗುಡ್ಡ), ರಾಯಗೌಡ ಕೇತಗೌಡರ, ಶಿದ್ರಾಮ ಯರಡತ್ತಿ ಇತರರು ಇದ್ದರು. ನ್ಯಾಯವಾದಿ ಸೋಮು ಹೊರಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net