

ಬೈಲಹೊಂಗಲ: ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ)ಗೆ ಗುರುವಾರ ಜರುಗಿದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ವಕ್ಕುಂದ ಗ್ರಾಮದ ಪರ್ವತಗೌಡ ಪಾಟೀಲ ಹಾಗೂ ಉಪಾಧ್ಯಕ್ಷರಾಗಿ ನೇಸರಗಿ ಗ್ರಾಮದ ಮಾಲತಿ ಶಿವನಗೌಡ ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಪರ್ವತಗೌಡ ಪಾಟೀಲ ಮಾತನಾಡಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ಮಾಜಿ ಶಾಸಕ ಮಹಾಂತೇಶ ದೊಡಗೌಡರ ಅವರ ಮಾರ್ಗದರ್ಶನದಲ್ಲಿ ನಾವು ಆಯ್ಕೆಯಾಗಿದ್ದು, ನಿರ್ದೇಶಕರ ಸಲಹೆಯೊಂದಿಗೆ ರೈತ ಸದಸ್ಯರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಚುನಾವಣಾಧಿಕಾರಿಗಳಾಗಿ ಹರೀಶ ಕಾಂಬಳೆ ಕಾರ್ಯನಿರ್ವಹಿಸಿದರು.
ಬ್ಯಾಂಕಿನ ನಿರ್ದೇಶಕರಾದ ಶಂಕರಗೌಡ ಪಾಟೀಲ, ಉಮೇಶ ಪಾಟೀಲ, ಶಂಕರಕುಮಾರ ಚಿಟ್ಟಿ, ಯಲ್ಲಪ್ಪ ಕೌಜಲಗಿ, ಅಕ್ಷರ ಆನಿಕಿವಿ, ಜಗದೀಶ ಬಜೇರಿ, ಶಿವಾನಂದ ಕಲ್ಲೂರ, ಲಕ್ಷ್ಮಪ್ಪ ಮಾಸ್ತಮರ್ಡಿ, ರತ್ನವ್ವ ಧಾರವಾಡ, ಗಂಗಾಧರ ಹೊಂಡದ, ಆನಂದ ಮೂಗಿ ಮುಖಂಡರಾದ ರಾಜನಗೌಡ ಪಾಟೀಲ, ರಾಯನಗೌಡ ಪಾಟೀಲ, ವಕ್ಕುಂದ ಗ್ರಾಪಂ ಅಧ್ಯಕ್ಷ ಸಂಗಪ್ಪ ಭದ್ರಶೆಟ್ಟಿ, ಪಿಕೆಪಿಎಸ್ ಅಧ್ಯಕ್ಷರಾದ ಗಜದಂಡ ಸುತಗಟಿ, ಅಶೋಕ ಭದ್ರಶೆಟ್ಟಿ, ಸುರೇಶ ಗಣಾಚಾರಿ, ಉಳವಪ್ಪ ಭದ್ರಶೆಟ್ಟಿ, ಚಂದನ ಕೌಜಲಗಿ, ಮಹಾಂತೇಶ ಮೂಗಿ, ವಿರೇಶ ಹೊಳೆಪ್ಪನವರ ಇದ್ದರು.