ಪಿಕೆಪಿಎಸ್‌ಗೆ ಸ್ವಪ್ನಿಲ್ ಪಾಟೀಲ ಅಧ್ಯಕ್ಷ

25Kagawad1
Published on

ಕಾಗವಾಡ: ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಅಧ್ಯಕ್ಷರಾಗಿ ಸ್ವಪ್ನಿಲ್ ಪಾಟೀಲ(ಕಾಕಾ) ಹಾಗೂ ಉಪಾಧ್ಯಕ್ಷರಾಗಿ ಪದ್ಮಾಕರ ಕರವ ಅವಿರೋಧವಾಗಿ ಆಯ್ಕೆಯಾದರು.

ತಾಲೂಕಿನ ವಿವಿಧೋದ್ದೇಶ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸೋಮವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಎರಡೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆಯಾಯಿತು ಎಂದು ಚುನಾವಣಾಧಿಕಾರಿ ಆರ್.ಎನ್.ನೂಲಿ ೋಷಿಸಿದರು.

ಅಧ್ಯಕ್ಷರಾಗಿ ಆಯ್ಕೆಯಾದ ಸ್ವಪ್ನಿಲ್ ಪಾಟೀಲ ಹಾಗೂ ಉಪಾಧ್ಯಕ್ಷ ಪದ್ಮಾಕರ ಕರವ ಮಾತನಾಡಿದರು. ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ಅಣ್ಣಾಸಾಹೇಬ ಕಠಾರೆ, ಶಾಂತಿನಾಥ ಕರವ, ಸುಧೀರ ಕರವ, ಕಿರಣ ಕುಮಟೆ, ಬಾಳಗೌಡ ಪಾಟೀಲ, ಪ್ರಕಾಶ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net