ಜನರ ಸೇವೆಗಾಗಿ ವೇಳೆ ವಿನಿಯೋಗ

3MDL1-1-WEb
ಕಲ್ಲೋಳಿ ಪಟ್ಟಣದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಜನಸಂಪರ್ಕ ಕಾರ್ಯಾಲಯ ಉದ್ಘಾಟನೆ ಜರುಗಿತು. ಸುರೇಶ ಕಬ್ಬೂರ, ಚನ್ನಪ್ಪ ಪಟ್ಟಣಶೆಟ್ಟಿ, ಬಾಲಶೇಖರ ಬಂದಿ, ಬಸವರಾಜ ಕಡಾಡಿ, ಶಂಕರ ಗೋರೋಶಿ ಇತರರು ಇದ್ದರು.
Published on

ಮೂಡಲಗಿ: ರಾಜ್ಯಸಭಾ ಸದಸ್ಯತ್ವದ ಅವಧಿಯನ್ನು ಜನರ ಸೇವೆಗಾಗಿ ಪ್ರಾಮಾಣಿಕವಾಗಿ ಸದ್ವಿನಿಯೋಗಿಸಿಕೊಳ್ಳುವೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಕೋ-ಆಪ್ ಕ್ರೆಡಿಟ್ ಸೊಸೈಟಿಯ ಕಟ್ಟಡದಲ್ಲಿ ಸ್ಥಾಪಿಸಿರುವ ಜನಸಂಪರ್ಕ ಕಾರ್ಯಾಲಯ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು. ನನಗೆ ದೊರೆತ ಅಧಿಕಾರವನ್ನು ಜನಸೇವೆಗೆ ಬಳಸಿಕೊಳ್ಳುವೆ ಎಂದರು. ಜಾರಕಿಹೊಳಿ ಸಹೋದರರು ನನ್ನ ಪರ ಇರುವುದರಿಂದ ಕೆಲಸ ಮಾಡಲು ಸಾಕಷ್ಟು ಬಲ ಬಂದಂತಾಗಿದೆ ಎಂದು ಅವರು ತಿಳಿಸಿದರು. ಯೋಧರು, ವೈದ್ಯರು, ವಕೀಲರು ಹಾಗೂ ಗಣ್ಯರು ಪಾಲ್ಗೊಂಡಿದ್ದರು. ಸುರೇಶ ಕಬ್ಬೂರ, ಚನ್ನಪ್ಪ ಪಟ್ಟಣಶೆಟ್ಟಿ, ಬಾಲಶೇಖರ ಬಂದಿ ಮಾತನಾಡಿದರು. ಬಸವರಾಜ ಕಡಾಡಿ ಸ್ವಾಗತಿಸಿದರು. ಶಂಕರ ಗೋರೋಶಿ ಪರಿಚಯಿಸಿದರು. ಸತೀಶ ಕಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಪ್ಪ ಗಿರೆಣ್ಣವರ ನಿರೂಪಿಸಿದರು. ಶ್ರೀಶೈಲ ತುಪ್ಪದ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net