

ಬೆಳಗಾವಿ: ಡಾ.ಸೂರಣ್ಣವರ ದಂಪತಿ ಜನರಿಗೆ ಸೇವೆ ನೀಡಲು ಎಲುಬು-ಕೀಲುಗಳ ಚಿಕಿತ್ಸೆ ಮತ್ತು ಮರು ಜೋಡಣೆಗೆ ಅತ್ಯಾಧುನಿಕ ಉಪಕರಣಗಳೊಂದಿಗೆ ತಜ್ಞ ವೈದ್ಯರೊಂದಿಗೆ ನೂತನ ಆಸ್ಪತ್ರೆ ಪ್ರಾರಂಭಿಸಿದ್ದಾರೆ. ಜನರಿಗೆ ಗುಣಮಟ್ಟದ ವೈದ್ಯಕೀಯ ಸೇವೆ ಸಿಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಇಲ್ಲಿನ ಅಶೋಕ ನಗರದ ಧರ್ಮನಾಥ ವೃತ್ತದ ಬಳಿ ನಿರ್ಮಾಣವಾಗಿರುವ ಡಾ.ಸೂರಣ್ಣವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಡಾ.ಸೂರಣ್ಣವರ ಆಸ್ಪತ್ರೆ ಸಂಚಾಲಕ ಡಾ.ಜಗದೀಶ ಸೂರಣ್ಣವರ ಮಾತನಾಡಿ, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳನ್ನು ಬಳಸಲಾಗುತ್ತಿದೆ. ರೋಬೋಟಿಕ್ ಜ್ವಾಯಿಂಟ್, ರಿಪ್ಲೇಸ್‌ಮೆಂಟ್, ಹಿಪ್ ರಿಪ್ಲೇಸ್‌ಮೆಂಟ್ ಸೇರಿದಂತೆ ಎಲುಬು, ಕೀಲು ಶಸ ಚಿಕಿತ್ಸೆ ಮಾಡಲಾಗುತ್ತಿದೆ. ನುರಿತ ತಜ್ಞ ವೈದ್ಯರ ಮೂಲಕ ಜನರಿಗೆ ಸೇವೆ ನೀಡಲು ಸಿದ್ಧವಾಗಿದ್ದೇವೆ ಎಂದರು.
ಹಿಪ್ಪರಗಿ ಇಂಚಗೇರಿ ಮಠದ ಸಮರ್ಥ ಪ್ರಭು ಮಹಾರಾಜರು, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಹಡಗಿನ ಮೂತೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿಗ್ಗಾಂವಿ ಶಾಸಕ ಯಾಸೀರಖಾನ್ ಪಠಾಣ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಡಾ.ನಿವೇದಿತಾ ಸೂರಣ್ಣವರ, ಡಾ.ರವಿ ಇಂಜಲಕರಂಜಿ, ಡಾ.ಸೌರಭ ಹಿರೇಮಠ, ಡಾ.ಕಾರ್ತಿಕ ಪಾಟೀಲ ಇತರರಿದ್ದರು.