ಜನರ ಸಮಸ್ಯೆಗಳಿಗೆ ಗ್ರಾಪಂ ಸದಸ್ಯರು ಸ್ಪಂದಿಸುವಂತಾಗಲಿ

16
Published on

ಬೈಲಹೊಂಗಲ: ತಾಲೂಕಿನ ದೊಡವಾಡ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸದಸ್ಯರನ್ನು ಮಾಜಿ ಶಾಸಕ ಜಗದೀಶ ಮೆಟಗುಡ್ಡ ಕಾರ್ಯಾಲಯದಲ್ಲಿ ಮಂಗಳವಾರ ಸನ್ಮಾನಿಸಿ ಗೌರವಿಸಲಾಯಿತು.

ಮಾಜಿ ಶಾಸಕ ಜಗದೀಶ ಮೆಟಗುಡ್ಡ ಮಾತನಾಡಿ, ಗ್ರಾಮದಲ್ಲಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಅವರ ವಿಶ್ವಾಸ ಗಳಿಸಿ ಕೆಲಸ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಈರಣ್ಣ ಚೌಡಣ್ಣವರ, ಮಹಾದೇವಿ ತುಪ್ಪದ, ಮಹ್ಮದ್ ಗೌಸ್ ಯಕ್ಕುಂಡಿ, ಸೋಮಲಿಂಗಪ್ಪ ಬಶೆಟ್ಟಿ, ನಾಗಯ್ಯ ದಾಭಿಮಠ ಅವರನ್ನು ಸನ್ಮಾನಿಸಲಾಯಿತು.

ಜಿ.ಸಿ. ಬೆಳವಡಿ, ಶಿವಾನಂದ ಚೌಡಣ್ಣವರ., ಸಂಗಪ್ಪ ಕಳ್ಳಿಮನಿ, ಸತೀಶ ಧಾರವಾಡ, ನೀಲಕಂಠ ಲಿಂಗದಳ್ಳಿ, ಕೀರಪ್ಪ ದಾಸನಕೊಪ್ಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net