ನೆಮ್ಮದಿಗೆ ವಚನ ಸಾಹಿತ್ಯ ರಾಮಬಾಣ

Kampli Vachan
ಕಂಪ್ಲಿಯ ಗುರುಮಠದಲ್ಲಿ ಏರ್ಪಡಿಸಿದ್ದ ಶಿವಾನುಭವ ಕಾರ್ಯಕ್ರಮದಲ್ಲಿ ಹೊಸಪೇಟೆಯ ಸರ್ಕಾರಿ ಹಿಪ್ರಾ ಶಾಲೆ ಶಿಕ್ಷಕ ಎನ್.ನಾಗರಾಜ ಮಾತನಾಡಿದರು. ಪ್ರಮುಖರಾದ ಡಾ.ಮೃತ್ಯುಂಜಯ ರುಮಾಲೆ, ಗೊಗ್ಗಚನ್ನಬಸವರಾಜ ಇದ್ದರು.
Published on

ಕಂಪ್ಲಿ: ವಚನಗಳು ಆಧ್ಯಾತ್ಮಿಕ ಮನೋಭಾವವನ್ನು ಪ್ರೇರೇಪಿಸುತ್ತವೆ ಎಂದು ಹೊಸಪೇಟೆಯ ಸರ್ಕಾರಿ ಹಿಪ್ರಾ ಶಾಲೆ ಶಿಕ್ಷಕ ಎನ್.ನಾಗರಾಜ ಹೇಳಿದರು.

ಇಲ್ಲಿನ ಗುರುಮಠದಲ್ಲಿ ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರಮದಿಂದ ಲಿಂ.ಮಿಠಾಯಿ ಸಂಗಮ್ಮನವರ ಸ್ಮರಣಾರ್ಥ ಶುಕ್ರವಾರ ಹಮ್ಮಿಕೊಂಡಿದ್ದ 243ನೇ ಶಿವಾನುಭವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಾವುದೇ ದೇಶ, ಕಾಲಮಾನದಲ್ಲಿ ಮಾನಸಿಕ ಮತ್ತು ಆತ್ಮಸ್ಥೈರ್ಯ ತುಂಬುವ ಮೂಲಕ ಅರ್ಥಪೂರ್ಣ ಬದುಕನ್ನು ರೂಪಿಸುತ್ತವೆ. ನೆಮ್ಮದಿಯ ಬದುಕಿಗೆ ವಚನ ಸಾಹಿತ್ಯ ರಾಮಬಾಣದಂತಿದೆ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ಮೃತ್ಯುಂಜಯ ರುಮಾಲೆ ಮಾತನಾಡಿ, ಓದ್ಸೋ ಕರಿಬಸಯ್ಯನವರ ಶಿವಾನಂದಾಶ್ರವು ಸಾಹಿತ್ಯ, ಸಂಗೀತ, ಅಧ್ಯಾತ್ಮ, ಧಾರ್ಮಿಕ ಮತ್ತು ಪುರಾಣ ಹೇಳಿಸುವ ಪರಂಪರೆಗೆ ಮಹತ್ವದ ಕೊಡುಗೆ ನೀಡಿದೆ ಎಂದರು.

ಆಶ್ರಮದ ಮುಖ್ಯಸ್ಥ ಗೊಗ್ಗ ಚನ್ನಬಸವರಾಜ, ಪಾಠಶಾಲೆ ಪ್ರಾಚಾರ್ಯ ಘನಮಠಯ್ಯ ಹಿರೇಮಠ, ಪ್ರಮುಖರಾದ ಕೆ.ಎಂ.ಚಂದ್ರಶೇಖರ, ಕಲ್ಗುಡಿ ಬಸಂತಮ್ಮ, ಸಿದ್ದರಾಮಯ್ಯ, ಎಚ್.ಎಂ.ಜಗದೀಶ, ಮೆಟ್ರಿ ಯೋಗರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net