ಸಂಘಟನೆಗೆ ಯುವಕರ ಪಾತ್ರ ಪ್ರಮುಖ

VISHWA KARMA
ಸಿಂಧನೂರಿನ ಶ್ರೀಪುರಂಜಂಕ್ಷನ್‌ನಲ್ಲಿ ತಾಲೂಕು ವಿಶ್ವಕರ್ಮ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಭಾನುವಾರ ನಡೆಯಿತು. ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್ ವೈ ಕಲ್ಲೂರು, ನಿಕಟ ಪೂರ್ವ ಅಧ್ಯಕ್ಷ ವೀರಭದ್ರಪ್ಪ ಹಂಚಿನಾಳ, ರಾಜ್ಯ ಕಾರ್ಯದರ್ಶಿ ಬ್ರಹ್ಮಗಣೇಶ ವಕೀಲ, ತಾಲೂಕು ಅಧ್ಯಕ್ಷ ಮೌನೇಶ ತಿಡಿಗೋಳ ಇತರರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಸಿಂಧನೂರು
ಜನಮುಖಿ ಕೆಲಸ ಹಮ್ಮಿಕೊಳ್ಳುವ ಮೂಲಕ ಸಮಾಜದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಲೋಹಿತ್ ವೈ ಕಲ್ಲೂರು ಹೇಳಿದರು.

ಪದಗ್ರಹಣ ಸಮಾರಂಭ

ನಗರದ ಶ್ರೀಪುರಂಜಂಕ್ಷನ್‌ನ ಸೂಗೂರೇಶ್ವರ ಟಿಂಬರ್ ಮತ್ತು ಹಾರ್ಡ್‌ವೇರ್‌ನಲ್ಲಿ ಆಯೋಜಿಸಿದ್ದ ತಾಲೂಕು ವಿಶ್ವಕರ್ಮ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.

ವಿಶ್ವಕರ್ಮ ಸಮಾಜದ ಸಂಘಟನೆ ಮತ್ತು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಬೇಕಾದರೆ ಸಮಾಜದ ಸಂಘಟನೆಗೆ ಯುವಕರ ಪಾತ್ರ ಹಿರಿದಾಗಿದೆ ಎಂದರು.

ಜಿಲ್ಲಾ ಯುವ ಘಟಕದ ಅಧ್ಯಕ್ಷರಾಗಿ ವಿಜಯಕುಮಾರ ಮಸ್ಕಿ ಅವರನ್ನು ಆಯ್ಕೆ ಮಾಡಲಾಯಿತು. ನಿಕಟ ಪೂರ್ವ ತಾಲೂಕು ಅಧ್ಯಕ್ಷ ವೀರಭದ್ರಪ್ಪ ಹಂಚಿನಾಳ, ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಮೌನೇಶ ತಿಡಿಗೋಳರಿಗೆ ವಿಶ್ವಕರ್ಮ ಧ್ವಜ ಹಸ್ತಾಂತರ ಮಾಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.

ಪ್ರಮುಖರಾದ ಸೋಮನಾಥ ಪತ್ತಾರ ಸುಕಾಲಪೇಟೆ, ಜಿಲ್ಲಾ ಅಧ್ಯಕ್ಷ ಮಾರುತಿ ಬಡಿಗೇರ, ಜಿಲ್ಲಾ ಯುವ ಘಟಕದ ನೂತನ ಅಧ್ಯಕ್ಷ ವಿಜಯಕುಮಾರ ಮಸ್ಕಿ, ಮನೋಹರ, ರಾಮು ಗಾಣದಾಳ, ವೀರೇಶ ದೇವರಗುಡಿ, ಶಂಕ್ರಪ್ಪ ನಿಡಿಗೋಳ, ವೆಂಕಟೇಶ ಆನ್ವರಿ, ಉಮೇಶ ಬಡಿಗೇರ ಲಿಂಗಸೂರು, ಅಂಬಣ್ಣ ಗೊರೇಬಾಳ, ತಿರುಮಲ ಆಚಾರಿ, ಧರ್ಮಣ್ಣ ಗುಂಜಳ್ಳಿ, ಚನ್ನಪ್ಪ ಕೆ.ಹೊಸಹಳ್ಳಿ, ಗಣೇಶ ಸುಕಾಲಪೇಟೆ, ಕಾಳಪ್ಪ ಕಣ್ಣೂರು, ಮಂಜುನಾಥ ಬಡಿಗೇರ, ಬಸವರಾಜ ಕಮತಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net