

ಅರಕೇರಾ: ತಾಲೂಕಿನ ಭೂಮನಗುಂಡ ಗ್ರಾಮದಲ್ಲಿ ಹಳೇ ವೈಷಮ್ಯಕ್ಕೆ ಭಾನುವಾರ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಕೊಲೆಗೀಡಾಗಿದ್ದಾನೆ.
ಬಸವರಾಜ ತಿಮ್ಮಯ್ಯ (40) ಮೃತ. ಭಾನುವಾರ ರಾತ್ರಿ ಕಲಂಗೇರ ದೊಡ್ಡ ಶಾಲೆ ಬಳಿ ಬಸವರಾಜ ಹಾಗೂ ಸಂಬಂಧಿಕರ ನಡುವೆ ಹೊಡೆದಾಟವಾಗಿದೆ.
ಹಲ್ಲೆಯಿಂದ ಬಸವರಾಜ ಕುತ್ತಿಗೆ ಮತ್ತು ದೇಹದ ವಿವಿಧ ಭಾಗಗಳಲ್ಲಿ ಗಂಭೀರ ಗಾಯಗಳಾಗಿ ಮೃತಪಟ್ಟಿದ್ದಾರೆ. ಜಮೀನಿನ ವಿಚಾರಕ್ಕೆ ಆಗಾಗ ಜಗಳವಾಗುತ್ತಿತ್ತು ಎನ್ನಲಾಗಿದೆ.
ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.