

ನಂದೇಶ್ವರ: ದೇವಾಲಯಗಳ ತೊಟ್ಟಿಲಾದ ನಂದೇಶ್ವರ ಗ್ರಾಮದಲ್ಲಿ ನಾಲ್ಕು ತಲೆಮಾರುಗಳ ಇತಿಹಾಸ ಹೊಂದಿರುವ ಗಡಾಮ ಮುತ್ಯಾನ ಜಾತ್ರೆ ಫೆ.12ರಂದು ಸಂಭ್ರಮದಿಂದ ಜರುಗಲಿದೆ. ಗ್ರಾಮದ ಸಿದ್ಧಿ ಪುರುಷ ಚಂಡಕಿ ಮನೆತನದ ಲಿಂ.ದುಂಡಪ್ಪ ಭೀಮಪ್ಪ ಚಂಡಕಿ ಅವರು ಗಡಾಮ ಮುತ್ಯಾ ಎಂದೇ ಗ್ರಾಮದಲ್ಲಿ ಚಿರಪರಚಿತರಾಗಿದ್ದಾರೆ.
ಭಕ್ತರ ಉದ್ಧಾರಕ್ಕಾಗಿ ಮಧ್ಯರಾತ್ರಿ ಪೂಜೆ: ಗಡಾಮ ಮುತ್ಯಾ ಅವರು ಗ್ರಾಮಸ್ಥರು ಹಿತಕ್ಕಾಗಿ ಮಧ್ಯರಾತ್ರಿ 12 ಗಂಟೆಗೆ ಎದ್ದು ಕೃಷ್ಣಾ ನದಿಯಲ್ಲಿ ಪುಣ್ಯಸ್ನಾನ ಮಾಡಿ, ಕಂಬಳಿ ಹೊದ್ದುಕೊಂಡು ಮಡಿಯಿಂದ ಬಂದು ದೇವಸ್ಥಾನಗಳಿಗೆ ಭಕ್ತಿಯಿಂದ ನೀರು ಹಾಕಿ ಕರ್ಪೂರ, ಉದುಬತ್ತಿ ಬೆಳಗುತ್ತಿದ್ದರು. ಒಮ್ಮೆ ಬರಗಾಲ ಬಂದು ಗ್ರಾಮದಲ್ಲಿ ಹನುಮಾನ ದೇವರ ಕಾರ್ತಿಕೋತ್ಸವ ಮಾಡದಂತಹ ಕಷ್ಟ ಪರಿಸ್ಥಿತಿ ಬಂದಾಗ ಗ್ರಾಮಸ್ಥರು ಗಡಾಮ ಮುತ್ಯಾನ ಮೊರೆ ಹೋದರು. ಗಡಾಮ ಮುತ್ಯಾ ಅವರು ಹನುಮಾನ ದೇವರ ಮುಂದೆ ಕಂಬಳಿ ಹಾಸಿ ಬೇಡಿಕೊಂಡಾಗ ಕಾರ್ತಿಕೋತ್ಸವ ಮಾಡಲು ಅಗತ್ಯವಿರುವ ವಸ್ತುಗಳು ಕಂಬಳಿಯಲ್ಲಿ ಬಂದು ಪವಾಡವಾಯಿತು.
ಮುತ್ಯಾನಿಂದ ್ಲೇಗ್ ಮಾಯ: ಗ್ರಾಮದಲ್ಲಿ ್ಲೇಗ್ ಕಾಯಿಲೆ ಬಂದು ಸಾವು-ನೋವುಗಳಾಗಿ ಗ್ರಾಮಸ್ಥರು ಭಯ ಭೀತರಾಗಿದ್ದರು. ಆಗ ಗಡಾಮ ಮುತ್ಯಾ ಗ್ರಾಮದ ಸೂತ್ತಲೂ ಹನುಮಾನ ದೇವರ ಅಂಗಾರ ಹಾಕಿ ಭಕ್ತಿ ನಮನ ಸಲ್ಲಿಸಿದಾಗ ್ಲೇಗ್ ಕಾಯಿಲೆ ದೂರವಾಯಿತು. ಬಬಲಾದಿ ಮಠದ ಸಂಸ್ಕಾರ ಹೊಂದಿರುವ ಗಡಾಮ ಮುತ್ಯಾ ಅನೇಕ ಪವಾಡಗಳನ್ನು ಮಾಡಿದ್ದಾರೆ. ಗ್ರಾಮದಲ್ಲಿ ಜಾತ್ರೆ ಜರುಗುವ ಮೊದಲು ಗಡಾಮ ಮುತ್ಯಾಗೆ ಪೂಜೆ ಸಲ್ಲಿಸಿ ಕಂಬಳಿಯಲ್ಲಿ ತೆಂಗಿನಕಾಯಿ ತಂದು ಒಡೆಯುವ ಸಂಪ್ರದಾಯ ಈಗಲೂ ಮುಂದುವರಿದಿದೆ. ಗ್ರಾಮದಲ್ಲಿ ಗಡಾಮ ಮುತ್ಯಾ ಗದ್ದುಗೆ ನಿರ್ಮಿಸಿ ನಿತ್ಯ ಪೂಜೆ ಮಾಡಲಾಗುತ್ತಿದೆ. ಅವರ ವಂಶದ ಹಿರಿಯ ಬಸಪ್ಪ ಚಂಡಕಿ ಗಡಾಮ ಮುತ್ಯಾನ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.