ಕಾರಟಗಿ: ತಾಲೂಕಿನ ಮೈಲಾಪುರ ಗ್ರಾಪಂ ಪಿಡಿಒ ಕೆಕೆಆರ್‌ಡಿಬಿ ಯಡಿ ನಿರ್ಮಾಣ ಮಾಡಲಾದ ಕಾಮಗಾರಿಗೆ ಎನ್‌ಒಸಿ ನೀಡಲು ಹಣಕ್ಕೆ ಬೇಡಿಕೆಯಿಟ್ಟ ವಿಡಿಯೋ ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈಲಾಪುರ ಗ್ರಾಮದಲ್ಲಿ ಕಕ ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಡಿ ನಿರ್ಮಿತಿ ಕೇಂದ್ರ, ಸಿಸಿ ರಸ್ತೆ, ಹಾಗೂ ಚರಂಡಿ ನಿರ್ಮಾಣ ಕಾರ್ಯ ಅನುಷ್ಠಾನ ಮಾಡಲಾಗಿತ್ತು. ಕಾಮಗಾರಿ ಪೂರ್ಣಗೊಂಡಿದ್ದು, ಅದಕ್ಕೆ ಎನ್ ಒಸಿ ನೀಡುವಂತೆ ಗ್ರಾಮದ ಸ್ಥಳೀಯರು ಪಿಡಿಒ ಸೈಯದ್ ಪಾಷಾಗೆ ಮಾಡಿದ ಕೆಲಸಕ್ಕೆ ಎನ್‌ಒಸಿ ನೀಡಲು ಹಣ ಕೇಳಿದರೆ ಹೇಗೆ ಎಂದು ಕೇಳಿದ್ದಾರೆ. ಈ ವೇಳೆ ಪಿಡಿಒ ನಾನು ಮೇಲಿನವರಿಗೆ ಕೊಡಬೇಕು. ಖುಷಿಯಿಂದ ಕೊಡಬೇಕು.
ನಾನು ಮೇಲಿನವರಿಗೆ ಏನು ಕೊಡಲಿ?. ನಿಮಗೆ ಗೊತ್ತಾ. ಜಡ್‌ಪಿ, ಟಿಪಿಗೆ ಕೊಡಬೇಕು ಎನ್ನುತ್ತಾರೆ. ಹಾಗಾದರೆ, ಅವರ ನಂಬರ್ ಕೊಡಿ ನಾವೇ ಮಾತನಾಡುತ್ತೇವೆ ಎನ್ನುತ್ತಾರೆ. ಇದಕ್ಕೆ ಪಿಡಿಒ ಅದೆಲ್ಲ ಆಗೋಲ್ಲ ಸರ್ ಎನ್ನುತ್ತಾರೆ. ನಂತರ ಸರ್ ಇಲ್ಲಿ ಕೇಳಿ, ಇಲ್ಲಿಯವರೆಗೆ ಎಲ್ಲ ಅಧಿಕಾರಿಗಳು ಶೇ. 42 ಹಣ ಮುರಿದುಕೊಂಡಿದ್ದಾರೆ ಎನ್ನುವ ಸಂಭಾಷಣೆ ವಿಡಿಯೋದಲ್ಲಿದೆ.