ಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ

27ckd1
Published on

ಚಿಕ್ಕೋಡಿ: ಪದ್ಯಕ್ಕೆ ಅದರದೆ ವಿಶೇಷತೆ ಇದೆ. ಶರಣರ ಕೃತಿಗಳು ಕನ್ನಡ ಸಾಹಿತ್ಯಕ್ಕೆ ಅಮೋ ಕೊಡುಗೆ ನೀಡಿವೆ ಎಂದು ಹಿರಿಯ ಸಾಹಿತಿ ಎಸ್​.ವೈ.ಹಂಜಿ ಹೇಳಿದರು.

ತಾಲೂಕಿನ ಉಮರಾಣಿ ಗ್ರಾಮದ ರಾಮಲಿಂಗ ದೇವಸ್ಥಾನದಲ್ಲಿ ಚಿಕ್ಕೋಡಿಯ ಉನ್ನತಿ ಸ್ವಯಂಸೇವಾ ಸಂಸ್ಥೆ ಹಾಗೂ ಸಾಹಿತ್ಯ ಗೂಡು ವೇದಿಕೆಯ ಸಹಯೋಗದಲ್ಲಿ ಬುಧವಾರ ಶಿವರಾತ್ರಿ ಅಂಗವಾಗಿ ಹಮ್ಮಿಕೊಂಡಿದ್ದ ಕಾವ್ಯ ಶಿವರಾತ್ರಿ&2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಗತ್ತೇ ನಿಬ್ಬೆರಗಾಗುವ ಸಾಹಿತ್ಯ ಕನ್ನಡ ಭಾಷೆಯಲ್ಲಿದೆ. ಆದರೆ, ಅದು ಬೇರೆ ಭಾಷೆಗೆ ಹೆಚ್ಚು ತರ್ಜುಮೆಯಾಗಬೇಕಾದ ಅವಶ್ಯಕತೆ ಇದೆ ಎಂದರು.

ಉಮರಾಣಿ ಗ್ರಾಪಂ ಅಧ್ಯ ಲಕ್ಷ$್ಮಣ ಪೂಜೇರಿ ಮಾತನಾಡಿ, ಸಾಹಿತ್ಯದಿಂದ ಸಮಾಜದ ಕೊಳಕು ತೊಳೆಯಬಹುದು. ಸರ್ಕಾರ ಹಾಗೂ ಜನಪ್ರತಿನಿಧಿಗಳು ಸಾಹಿತ್ಯವನ್ನು ಪ್ರೋತ್ಸಾಹಿಸಬೇಕು ಎಂದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ನಿರ್ದೇಶಕ ಡಾ.ಸುಬ್ರಾವ ಎಂಟೆತ್ತಿನವರ ಮಾತನಾಡಿದರು.

ಸರೋಜಿನಿ ಸಮಾಜೆ, ಲಲಿತಾ ಹಿರೇಮಠ, ಚಂದ್ರಶೇಖರ ಚಿನಕೇಕರ, ಜ್ಯೋತಿ ಕಬ್ಬೂರೆ, ಬಿ.ಆರ್​.ಕಾಮನಗೋಳ, ಶೃತಿ ಹೆಗ್ಗೆ, ಶೈಲಜಾ ಮಠಪತಿ, ಸಾಗರ ಝಂಡೆನ್ನವರ, ಪಿ.ಎನ್​.ತಳವಾರ, ದೇವಸ್ಥಾನ ಸಮಿತಿ ಸದಸ್ಯ ಪರಗೌಡ ಪಾಟೀಲ, ಉನ್ನತಿ ಸ್ವಯಂಸೇವಾ ಸಂಸ್ಥೆ ಕಾರ್ಯದರ್ಶಿ ವಿಮಲಾ ಚಿನಕೇಕರ, ಶಿದಗೌಡ ಪಾಟೀಲ, ರುದ್ರಗೌಡ ಪಾಟೀಲ, ವಿರೂಪಾ ಕಾಮಗೌಡ, ಶಿವಾನಂದ ಮರ್ಯಾಯಿ, ಬೀರಪ್ಪ ಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net