ಸಾಹಿತ್ಯಕ್ಕೆ ಕುವೆಂಪು ಕೊಡುಗೆ ಅಪಾರ

28Rayabag1
Published on

ರಾಯಬಾಗ: ಶ್ರೀರಾಮಾಯಣ ದರ್ಶನಂ ಮಹಾಕಾವ್ಯವನ್ನು ಕಟ್ಟಿಕೊಡುವುದರ ಮೂಲಕ ಕುವೆಂಪು ವಿಶ್ವಮಾನವ ಕವಿ ಎನ್ನಿಸಿಕೊಂಡಿದ್ದಾರೆ ಎಂದು ಪ್ರಾಚಾರ್ಯ ಟಿ.ಎಸ್.ಒಂಟಗೂಡಿ ಹೇಳಿದರು.

ತಾಲೂಕಿನ ಹಿಡಕಲ್ಲ ಗ್ರಾಮದ ಎಸ್‌ಪಿಎಂ ವಸಂತರಾವ್ ಪಾಟೀಲ ಪದವಿಪೂರ್ವ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಕುವೆಂಪು ಬದುಕು ಬರಹ ಕುರಿತು ಭಾಷಣ ಸ್ಪರ್ಧೆ ಹಾಗೂ ಬಿಎ ಮತ್ತು ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕುವೆಂಪು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆ ಅಪಾರ ಎಂದರು.

ಭಾಷಣ ಸ್ಪರ್ಧೆಯಲ್ಲಿ ಚೈತ್ರಾ ಹೊಸಟ್ಟಿ (ಪ್ರಥಮ), ಸರಸ್ವತಿ ಸಣ್ಣಕ್ಕಿನವರ (ದ್ವಿತೀಯ) ಹಾಗೂ ಸಂಗೀತಾ ಬಾವಚಿ (ತತೀಯ) ಬಹುಮಾನ ಪಡೆದರು. ಪ್ರಾಚಾರ್ಯ ಆರ್.ಎಸ್.ತಳವಾರ, ಪ್ರೊ.ಎಸ್.ವಿ.ವಗ್ಗಾ, ಪ್ರೊ.ಮಾಯಪ್ಪ ಶಿರಡೋಣಿ, ಶಿವಾನಂದ ಪಾರ್ಥನಳ್ಳಿ, ಸಂಜೀವ ಇಮ್ಮಡಿ, ಬಸವರಾಜ ಪೂಜೇರಿ ಇತರರಿದ್ದರು. ನೀಲಾವತಿ ಚಿನ್ನಾಕಟ್ಟಿ ನಿರೂಪಿಸಿದರು. ಸುಲೋಚನಾ ಹುಕ್ಕೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net