

ಅಥಣಿ ಗ್ರಾಮೀಣ: ಕಲಿತ ಶಾಲೆ ಹಾಗೂ ಶಿಕ್ಷಕರನ್ನು ಗೌರವಿಸಿ ಸಾರ್ಥಕತೆ ಮೆರೆಯುವುದರ ಜತೆಗೆ ಪ್ರೀತಿ, ಪ್ರಮಾಣಿಕತೆ ಉಳಿದಿದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಸಾಕ್ಷಿ ಎಂದು ನಿವೃತ್ತ ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತ ಭಜಂತ್ರಿ ಹೇಳಿದರು.
ತಾಲೂಕಿನ ಕೋಹಳ್ಳಿ ಗ್ರಾಮದ ಅಪ್ಪಯ್ಯಸ್ವಾಮಿ ದೇವಸ್ಥಾನದಲ್ಲಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ 2003-04ನೇ ಮತ್ತು 2004-05ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜೀವನದಲ್ಲಿ ಶಿಕ್ಷಕರ ಪಾತ್ರ ಅಪಾರ. ಬದುಕಿಗೆ ಬೆಳಕಾದ ಶಿಕ್ಷಕರನ್ನು ಮರೆಯಬಾರದು ಎಂದರು. ನಿವತ್ತ ಶಿಕ್ಷಕ ಶ್ರೀಶೈಲ ಮೂಗಲೆ ಮಾತನಾಡಿ, ಸಾಧನೆ ಹಿಂದೆ ಗುರುಗಳ ಮಾರ್ಗದರ್ಶನ ಅಗತ್ಯ ಎಂದರು.
ಕಕಮರಿಯ ಗುರುದೇವಾಶ್ರಮದ ಆತ್ಮಾರಾಮ ಸ್ವಾಮೀಜಿ ಆಶೀರ್ವಚನ ನೀಡಿದರು. ವಿಜಯಪುರದ ಶಂಕರಾನಂದ ಸ್ವಾಮೀಜಿ, ಅಜ್ಜಪ್ಪ ಪೂಜಾರ, ಸವಿತಾ ಅಂಗಡಿ, ಸಿದರಾಯ ಮುಂಜಿ, ಮಹಾದೇವಿ ಹಿರೇಮಠ, ಆಶಾ ಕನಮಡಿ, ಬಾಬುರಾವ ಭಜಂತ್ರಿ, ತುಕಾರಾಮ ಡತಾರೆ ಇತರರಿದ್ದರು. ಹಳೆ ವಿದ್ಯಾರ್ಥಿಗಳು ಜನಾಬಾಯಿ ಬಡಚಿ, ಬಿ.ಬಿ.ಕುಂಬಾರ, ದಾನಮ್ಮ ಝರೆ ಅನಿಸಿಕೆ ಹಂಚಿಕೊಂಡರು. ಹಳೆ ವಿದ್ಯಾರ್ಥಿ ದಾನಮ್ಮ ಝರೆ ಸ್ವಾಗತಿಸಿದರು. ಉಪನ್ಯಾಸಕ ಭೀಮಪ್ಪ ಕುಂಬಾರ ನಿರೂಪಿಸಿದರು.