ಕಲಿಕೆಗೆ ವಿಜಯವಾಣಿ ದಾರಿದೀಪ

7mamadapur1
Published on

ಮಮದಾಪುರ: ವಿಜಯವಾಣಿ ದಿನಪತ್ರಿಕೆ ಅಲ್ಪಾವಧಿಯಲ್ಲಿ ಅತಿ ಹೆಚ್ಚು ಓದುಗರನ್ನು ಹೊಂದಿದ ನಾಡಿನ ನಂಬರ್​ ಒನ್​ ಪತ್ರಿಕೆಯಾಗಿದೆ. ಗ್ರಾಮೀಣ ಭಾಗಕ್ಕೆ ಪತ್ರಿಕೆ ತಲುಪಿಸುವ ಕಾರ್ಯವೆಖರಿ ಶ್ಲಾನೀಯ ಎಂದು ಮುಖ್ಯಶಿಕ ರವೀಂದ್ರ ದೇಮಶೆಟ್ಟಿ ಹೇಳಿದರು.

ಗ್ರಾಮದ ಚಿಂತಾಮಣಿ ಪಾವಟೆ ಪ್ರೌಢಶಾಲೆಯಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿಗಳಿಗೆ ಯುವಮುಖಂಡ ಅಮರನಾಥ ಜಾರಕಿಹೊಳಿ ಉಚಿತವಾಗಿ ಕೊಡಮಾಡುತ್ತಿರುವ ವಿಜಯವಾಣಿಯ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ಬುಧವಾರ ವಿತರಿಸಿ ಮಾತನಾಡಿದರು.

ವಿಜಯವಾಣಿ ಪತ್ರಿಕೆಯು ಸಮಾಜದ ದೈನಿಕ ಸುದ್ದಿಗಳ ಜತೆ ಪತ್ರಿಕೆಯು ವಿದ್ಯಾರ್ಥಿಗಳ ಏಳಿಗೆಗಾಗಿ ನುರಿತ ಶಿಕರಿಂದ ಪ್ರಶ್ನೋತ್ತರಗಳ ಮಾದರಿ, ಸಾಮಾನ್ಯ ಜ್ಞಾನ, ಚಿತ್ರಕಲೆ ಒಳಗೊಂಡ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ಹೊರತಂದು ದಾರಿದೀಪವಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಣಪ್ರೇಮಿಗಳ ಮೂಲಕ ಉಚಿತವಾಗಿ ಪತ್ರಿಕೆ ವಿತರಿಸುವ ವಿತರಕರ ಪಾತ್ರವೂ ಹೆಚ್ಚಿದೆ ಎಂದರು.

ಗ್ರಾಮೀಣ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಈರಣ್ಣ ಜನ್ಮಟ್ಟಿ ಮಾತನಾಡಿ, ಶಿಕರು ಬೋಧನೆ ಜತೆಗೆ ಹೆಚ್ಚು ಅನುಕೂಲವಾಗಲೆಂದು ಯುವ ನಾಯಕ ಅಮರನಾಥ ಜಾರಕಿಹೊಳಿ ಅವರು ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆಯನ್ನು ನಿರಂತರ 7 ತಿಂಗಳವರೆಗೆ ಉಚಿತವಾಗಿ ಕೊಡಮಾಡುತ್ತಿದ್ದಾರೆ ಎಂದರು.

ಸಂದ ಅಧ್ಯ ಎಂ.ಆರ್​. ಕಮತ ಅಧ್ಯತೆ ವಹಿಸಿದ್ದರು. ಸುರೇಶ ಸನದಿ, ಕೆಂಪಣ್ಣ ಮೆಲನ್ನವರ, ಸಹಶಿಕರಾದ ಸಿ.ಎಂ. ಪಟಾತ, ಎಂ.ಬಿ. ಹಾದಿಮನಿ, ಜಿ.ಎಂ. ಹುಣಸಿಗಿಡದ, ಎಂ.ವಿ. ಕಡಕೋಳ, ಎಂ.ಎ. ಪಟ್ಟಣ, ಎ.ಎಂ. ಕಮತ, ಎಂ.ಪಿ. ಕಮತ, ಸುಜಾತಾ ಕೆಂಚನ್ನವರ, ಶಿವಲೀಲಾ ಕಪರಟ್ಟಿ, ಪರಶುರಾಮ ವಗ್ಗಣ್ಣವರ, ವರದಿಗಾರ ಸಂಗಮೇಶ ಅಂಗಡಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net