

ತಲ್ಲೂರ: ಬದುಕಿನ ಕತ್ತಲೆ ಕಳೆದು, ಜ್ಞಾನದ ಬೆಳಕಿನ ದಾರಿ ತೋರಿಸುವ ಪುರಾಣ, ಪುಣ್ಯ ಕಥೆಗಳನ್ನು ಆಲಿಸಬೇಕು ಎಂದು ತೊರಗಲ್ಲಮಠದ ದೀಪಕ ಸ್ವಾಮಿ ಹೇಳಿದರು.
ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಸೋಮವಾರ ಕಾರ್ತಿಕ ದೀಪೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರೂ ಭಕ್ತಿ ಭಾವದಿಂದ ದೇವರನ್ನು ಸ್ಮರಿಸುವಂತೆ ಸಲಹೆ ನೀಡಿದರು.
ದೇವರಿಗೆ ವಿಶೇಷ ಪೂಜೆ ಮತ್ತು ಪಲ್ಲಕ್ಕಿ ಉತ್ಸವದ ನಂತರ ಮಹಾಪ್ರಸಾದ ಜರುಗಿತು. ಸಾಯಿ ಪಿಕೆಪಿಎಸ್ ಅಧ್ಯಕ್ಷ ಮಹಾರುದ್ರಪ್ಪ ಉಪ್ಪಿನ, ಮುಖಂಡ ಶಂಕರಗೌಡ ಪಾಟೀಲ, ಈರಣ್ಣ ಹುದ್ದಾರ ಮಾತನಾಡಿದರು.
ಅರ್ಚಕ ಬಸಯ್ಯ ಮಠಪತಿ, ಗುರುರಾಜ ಚವನವರ, ವಿಜಯ ಉಪ್ಪಿನ, ಉಮೇಶ ಯರಗಟ್ಟಿ, ನೀಲಕಂಠ ಹಂಜಿ, ರಾಜು ಉಪ್ಪಿನ, ರವೀಂದ್ರ ಜೊಲಾಪುರಿ, ಆರ್.ಎಸ್.ಕಲ್ಲನ್ನವರ, ಮಹಾಂತೇಶ ಹೊಸಮಠ, ದರ್ಶನ ಉಪ್ಪಿನ, ಸಂಜಯ ಯರಗಟ್ಟಿ, ಮೌನೇಶ ಬಡಿಗೇರ, ಮಹಾಂತೇಶ ಮಾಸ್ತಮರಡಿ, ಸುಷ್ಮಿತಾ ಉಪ್ಪಿನ, ಮಂಜುಳಾ ಮಠಪತಿ, ಸವಿತಾ ಯರಗಟ್ಟಿ ಇತರರಿದ್ದರು.