

ತಲ್ಲೂರ: ನಾಡಿನ ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ಹೊರತಂದಿರುವ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬಹಳಷ್ಟು ಉಪಯುಕ್ತವಾಗಿದೆ ಎಂದು ಪಿಡಿಒ ಎಚ್.ಕೆ.ಚೌರಡ್ಡಿ ಹೇಳಿದರು.
ಗ್ರಾಮದ ಬಸವೇಶ್ವರ ಯುವಕ ಮಂಡಳ ಪ್ರೌಢಶಾಲೆಯಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಜಯವಾಣಿಯ ವಿದ್ಯಾರ್ಥಿ ಉದ್ಯೋಗಮಿತ್ರ ಪತ್ರಿಕೆ ವಿತರಿಸಿ ಮಾತನಾಡಿ, ಎಸ್ಸೆಸ್ಸೆಲ್ಸಿ, ಪಿಯುಸಿ ಜತೆಗೆ ಸಾಮಾನ್ಯಜ್ಞಾನ, ಪ್ರಸ್ತುತ ವಿದ್ಯಮಾನ ಹಾಗೂ ಸಾಮಾಜಿಕ ಬೆಳವಣಿಗೆ ಸೇರಿ ಸಮಗ್ರ ಮಾಹಿತಿ ಒಳಗೊಂಡ ಪತ್ರಿಕೆ ಜ್ಞಾನವೃದ್ಧಿಗೆ ಪೂರಕವಾಗಿದೆ ಎಂದರು.
ಮುಖ್ಯಶಿಕ್ಷಕ ರಾಜಶೇಖರ ದುಂಡನಕೊಪ್ಪ ಮಾತನಾಡಿ, ಕೇವಲ 1 ರೂ. ದರದಲ್ಲಿ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆ ನೀಡುತ್ತಿರುವ ಡಾ.ವಿಜಯ ಸಂಕೇಶ್ವರ ಕೊಡುಗೆ ಶ್ಲಾಘನೀಯ ಎಂದರು.
ಮುಖಂಡ ಕಲ್ಮೇಶ ಬಾಲರಡ್ಡಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ಎಸ್.ಎ್.ಬಡಿಗೇರ, ಜಿ.ಎ.ಕೊಟ್ರಶೆಟ್ಟಿ, ಪಿ.ಎ.ಸುಣದೋಳಿ, ಎಲ್.ಎ.ಪಾಟೀಲ, ಶೀಮ್ರಾನ ಪಟೇಲ್, ಎನ್.ಜಿ.ಕಟ್ಟಿ ಹಾಗೂ ಸಿಬ್ಬಂದಿ ಇದ್ದರು.