ಮಕ್ಕಳಿಗೆ ಟೀಶರ್ಟ್, ಪ್ಯಾಂಟ್ ಕೊಡುಗೆ

tshirts pant vitarane
ಕಂಪ್ಲಿ ತಾಲೂಕಿನ ಸುಗ್ಗೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಮಂಗಳಮುಖಿ ರಾಜಮ್ಮ ಟೀಶರ್ಟ್, ಪ್ಯಾಂಟ್‌ಗಳನ್ನು ಕೊಡುಗೆಯಾಗಿ ವಿತರಿಸಿದರು. ಸಿಆರ್‌ಪಿ ಎ.ಎಸ್.ಭುವನೇಶ್ವರ್, ಗ್ರಾಪಂ ಅಧ್ಯಕ್ಷ ಎ.ಕೆ.ಲೋಕೇಶ್, ಮುಖ್ಯಶಿಕ್ಷಕಿ ಸುಲೋಚನಾ, ಮಂಗಳಮುಖಿ ಉಮೇಶಮ್ಮ, ಪ್ರಮುಖ ಮಾರೇಶ್ ಇದ್ದಾರು.
Published on

ಕಂಪ್ಲಿ: ತಾಲೂಕಿನ ಸುಗ್ಗೇನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 31 ವಿದ್ಯಾರ್ಥಿಗಳಿಗೆ ಮಂಗಳಮುಖಿ ರಾಜಮ್ಮ 20,000 ರೂ. ಮೌಲ್ಯದ ಟೀಶರ್ಟ್, ಪ್ಯಾಂಟ್‌ಗಳನ್ನು ಶುಕ್ರವಾರ ಉಚಿತವಾಗಿ ವಿತರಿಸಿದರು.

ಮಂಗಳಮುಖಿ ರಾಜಮ್ಮ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಬಡ ಮಕ್ಕಳು ಅಭ್ಯಾಸ ಮಾಡುತ್ತಿದ್ದು ಇತರ ವಿದ್ಯಾರ್ಥಿಗಳಂತೆ ಇವರು ಉತ್ತಮ ವಸ್ತ್ರ ತೊಡಲಿ, ನಿತ್ಯ ಶಾಲೆಗೆ ಬರಲಿ, ಚೆನ್ನಾಗಿ ಶಿಕ್ಷಣ ಪಡೆದು ಅವರು ಮುಂದೆ ಸಮಾಜಕ್ಕೆ ಕೊಡುಗೆ ನೀಡುವಂತಾಗಲಿ ಎನ್ನುವ ಹಿತದೃಷ್ಠಿಯಿಂದ 15ಬಾಲಕಿಯರು ಸೇರಿ 31ವಿದ್ಯಾರ್ಥಿಗಳಿಗೆ ಟೀಶರ್ಟ್, ಪ್ಯಾಂಟ್ ಒದಗಿಸಿದ್ದೇನೆ ಎಂದರು.

ಸಿಆರ್‌ಪಿ ಎ.ಎಸ್.ಭುವನೇಶ್ವರ್ ಮಾತನಾಡಿ, ಆರ್ಥಿಕ ಹೃದಯ ವೈಶಾಲ್ಯರು ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಗತ್ಯ ಸೌಲಭ್ಯಗಳನ್ನು ದೊರಕಿಸಿಕೊಡಿ ಎಂದರು. ಗ್ರಾ.ಪಂ.ಅಧ್ಯಕ್ಷ ಎ.ಕೆ.ಲೋಕೇಶ, ಮುಖ್ಯಶಿಕ್ಷಕಿ ಸುಲೋಚನಾ, ಅತಿಥಿ ಶಿಕ್ಷಕ ರಘುಕುಮಾರ್, ಪ್ರಮುಖರಾದ ಮಾರೇಶ್, ಎಚ್.ನಾಗರಾಜ, ಮಂಗಳಮುಖಿ ಉಮೇಶಮ್ಮ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net