

ರಾಮದುರ್ಗ: ತಾಲೂಕಿನ ಚಂದರಗಿಯ ಎಸ್.ಎಂ.ಕಲೂತಿ ಸಂಯುಕ್ತ ಕ್ರೀಡಾ ವಸತಿ ಶಾಲೆಯಲ್ಲಿ ನಡೆದ 38ನೇ ಪುರುಷರ ಹಾಗೂ 34ನೇ ಮಹಿಳೆಯರ ರಾಷ್ಟ್ರಮಟ್ಟದ ಅಟ್ಯಾ-ಪಟ್ಯಾ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಪುರುಷರು ಮತ್ತು ಮಹಿಳೆಯರ ತಂಡಗಳು ಕ್ವಾಟರ್ ೈನಲ್‌ಗೆ ತಲುಪಿವೆ.
ಕರ್ನಾಟಕದ ಪುರುಷರ ತಂಡ ಲೀಗ್ ಪಂದ್ಯಗಳಲ್ಲಿ ಉತ್ತರ ಪ್ರದೇಶ ತಂಡವನ್ನು 2-0 ಸೆಟ್‌ಗಳಿಂದ, ಆಂಧ್ರ ಪ್ರದೇಶ ವಿರುದ್ಧ 2-0 ಸೆಟ್‌ಗಳಿಂದ ಹಾಗೂ ಪಶ್ಚಿಮ ಬಂಗಾಳ ವಿರುದ್ಧ 2-0 ಸೆಟ್‌ಗಳಿಂದ ಜಯಗಳಿಸಿ ಕ್ವಾಟರ್ ೈನಲ್‌ಗೆ ಕಾಲಿಟ್ಟಿದೆ. ಕರ್ನಾಟಕದ ತಂಡದ ಪರ ಸಂತೋಷ ನಾಯಕ, ಪ್ರಶಾಂತ ಹಕ್ಕಿ ಮತ್ತು ಉಳವೇಶ ಲಮಾಣಿ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಉಳಿದಂತೆ ಮಹಾರಾಷ್ಟ್ರ, ತಮಿಳುನಾಡು, ಕೇರಳ ಹಾಗೂ ಗೋವಾ ತಂಡಗಳು ಮುಂದಿನ ಹಂತಕ್ಕೆ ತಲುಪಿವೆ. ಕರ್ನಾಟಕದ ಮಹಿಳೆಯರ ತಂಡ ಲೀಗ್ ಪಂದ್ಯದಲ್ಲಿ ಚಂಡೀಗಡ ತಂಡದ ವಿರುದ್ದ 2-0 ಸೆಟ್‌ಗಳಿಂದ, ಎರಡನೇ ಪಂದ್ಯದಲ್ಲಿ ಗುಜರಾತ ತಂಡ ವಿರುದ್ಧ 2-0 ಸೆಟ್‌ಗಳಿಂದ ಜಯಗಳಿಸಿ ಕ್ವಾಟರ್ ೈನಲ್ ಹಂತಕ್ಕೆ ತಲುಪಿದೆ. ಪ್ರೀತಿ ಬುಳ್ಳಾ ಮತ್ತು ಅನಿತಾ ಮಾದರ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಉಳಿದಂತೆ ಮಹಾರಾಷ್ಟ್ರ, ಕೇರಳ ಹಾಗೂ ಗೋವಾ ತಂಡ ಮುಂದಿನ ಹಂತಕ್ಕೆ ತಲುಪಿವೆ.