

ಇಟಗಿ: ಸಮೀಪದ ಬೆಲೂರ ಗ್ರಾಮದ ಶ್ರೀಚನ್ನಬಸವೇಶ್ವರ ದೇವಸ್ಥಾನದಲ್ಲಿ ಸಾಂಸತಿಕ ಬಳಗ ಬೆಲೂರ ಸಹಯೋಗದಲ್ಲಿ ಭಾನುವಾರ ಕುವೆಂಪು ಜನ್ಮದಿನದ ನಿಮಿತ್ತ ವಿಶ್ವಮಾನವ ದಿನ ಆಚರಿಸಲಾಯಿತು.
ಇಟಗಿ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪ.ಪೂ ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಕಲ್ಮೇಶ ಕಾಪೋಲಿ ಮಾತನಾಡಿ, ಕುವೆಂಪು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಛಾಪು ಮೂಡಿಸಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದಿದ್ದಾರೆ ಎಂದರು. ಪಿಕೆಪಿಎಸ್ ಮಾಜಿ ಅಧ್ಯ ಕಲ್ಲಪ್ಪ ಕಟಗಿ ಅಧ್ಯತೆ ವಹಿಸಿದ್ದರು. ಶಿಕ ಗಂಗಾಧರ ಹನುಮಸಾಗರ, ಸಂಗೀತ ಶಿಕ ಪುಲಕೇಶಿ ಗಿರಿಯಾಲ, ನಾಗೇಶ ಬೆಣ್ಣಿ, ಶಂಕರ ಪತ್ತಾರ, ರಾಚಯ್ಯ ಕೆಂಜಡಿಮಠ, ವಿವೇಕ ಕುರಗುಂದ, ರಾಜು ಜೊಡಂಗಿ ಹಾಗೂ ಇತರರಿದ್ದರು.