

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ವಿವಿಧೋದ್ದೇಶಗಳ ಪ್ರಾಥಮಿಕ ಕಷಿ ಪತ್ತಿನ ಸಹಕಾರ ಸಂಕ್ಕೆ ಮುಂಬರುವ ಐದು ವರ್ಷಗಳ ಅವಧಿಗೆ ಶನಿವಾರ ಜರುಗಿದ ಅಧ್ಯ&ಉಪಾಧ್ಯರ ಚುನಾವಣೆಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ ಅಧ್ಯರಾಗಿ ಹಾಗೂ ಉಪಾಧ್ಯರಾಗಿ ಭೀಮಪ್ಪ ವ್ಯಾಪಾರಿ ಆಯ್ಕೆಯಾದರು.
13 ಸದಸ್ಯರ ಬಲದ ಕಲ್ಲೋಳಿ ಪಿಕೆಪಿಎಸ್ ಅಧ್ಯ ಸ್ಥಾನಕ್ಕೆ ನೀಲಕಂಠ ಕಪ್ಪಲಗುದ್ದಿ ಮತ್ತು ಬಸವರಾಜ ಪಾಟೀಲ ಮತ್ತು ಉಪಾಧ್ಯ ಸ್ಥಾನಕ್ಕೆ ಭೀಮಪ್ಪ ವ್ಯಾಪಾರಿ ಮತ್ತು ಶಂಕರ ಗೊರೋಶಿ ನಾಮಪತ್ರ ಸಲ್ಲಿಸಿದರು. 8 ಮತ ಪಡೆದು ಅಧ್ಯರಾಗಿ ನೀಲಕಂಠ ಕಪ್ಪಲಗುದ್ದಿ ಮತ್ತು ಉಪಾಧ್ಯ ಭೀಮಪ್ಪ ವ್ಯಾಪಾರಿ ಆಯ್ಕೆಯಾದರು. ಬೆಂಬಲಿಗರಿಂದ ಸತ್ಕಾರ ಸ್ವೀಕರಿಸಿ ನೂತನ ಅಧ್ಯ ನೀಲಕಂಠ ಕಪ್ಪಲಗುದ್ದಿ ಮಾತನಾಡಿ, ಕಲ್ಲೋಳಿ ಪಿಕೆಪಿಎಸ್ ಸಂದ ಷೇರುದಾರರು ಮತ್ತು ರೆತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಎಲ್ಲ ತರದ ಸಾಲ ಸೌಲಭ್ಯ ಒದಗಿಸುವುದಾಗಿ ಭರವಸೆ ನೀಡಿದರು.
ವಿಜಯೋತ್ಸವ: ಚುನಾವಣೆಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಬೆಂಬಲಿಗರು ಆಯ್ಕೆ ಆಗುತ್ತಿದಂತೆ ಗುಲಾಲ ಎರಚಿ, ಸಿಹಿ ವಿತರಿಸಿ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟ್ಟಣದ ಆರಾಧ್ಯ ದೆವ ಹನುಮಾನ ಮಂದಿರ ಸೇರಿ ವಿವಿಧ ದೇವರ ದರ್ಶನ ಪಡೆದರು. ಚುನಾವಣಾಧಿಕಾರಿಯಾಗಿ ಸುರೇಶ ಬಿರಾದಾರಪಾಟೀಲ ಕಾರ್ಯನಿರ್ವಹಿಸಿದರು. ಪಿಕೆಪಿಎಸ್ ನಿರ್ದೇಶಕರಾದ ಮಲ್ಲಪ್ಪ ಕಡಾಡಿ, ಆನಂದ ಹೆಬ್ಬಾಳ, ಕೆಂಪವ್ವ ಗೋರೋಶಿ, ಮಲ್ಲಪ್ಪ ಪೂಜೇರಿ, ಧರ್ಮಣ್ಣ ನಂದಿ, ವಸಂತ ತಹಶೀಲ್ದಾರ, ಮುಖಂಡರಾದ ಬಸಗೌಡ ಪಾಟೀಲ, ಬಸವಣ್ಣಿ ಗೊರೋಶಿ, ಮಲ್ಲಪ್ಪ ಖಾನಾಪುರ, ಬಸವಂತ ದಾಸನಾಳ, ಸುಭಾಸ ಕುರಬೇಟ, ಮಲ್ಲಪ್ಪ ಹೆಬ್ಬಾಳ, ಮಹಾದೇವ ಮದಬಾವಿ, ಶಿವಾನಂದ ಹೆಬ್ಬಾಳ, ಪರಪ್ಪ ಕಡಾಡಿ, ಮಹಾಂತೇಶ ಕಪ್ಪಲಗುದ್ದಿ, ಬಸವರಾಜ ಜಗದಾಳಿ, ರಾಮಣ್ಣ ದಬಾಡಿ, ಈರಪ್ಪ ಹೆಬ್ಬಾಳ, ಪ್ರಕಾಶ ಪತ್ತಾರ, ಉಮೇಶ ಬೂದಿಹಾಳ, ಬಸವರಾಜ ಯಾದಗೂಡ, ಪ್ರಮೋದ ನುಗ್ಗಾನಟ್ಟಿ, ಪ್ರಕಾಶ ಮೇತ್ರಿ, ಮೋಹನ ಗಾಡ್ಡಿವಡರ ಮತ್ತು ಪಪಂ ಸದಸ್ಯರು ಇತರರಿದ್ದರು.