ಬಂಜೆತನಕ್ಕೆ ಸೂಕ್ತ ಚಿಕಿತ್ಸೆ ಲಭ್ಯ

web1
ಮಿರಜದ ಸಚಿನ ಆಸ್ಪತ್ರೆಯಲ್ಲಿ ಉಚಿತ ಶಿಬಿರವನ್ನು ಡಾ.ಸಚಿನ ಸುಗಣ್ಣವರ ಉದ್ಘಾಟಿಸಿದರು. ಡಾ.ನೇಹಾ ಸುಗಣ್ಣವರ ಇದ್ದರು.
Published on

ಕಾಗವಾಡ: ಸಮೀಪದ ಮಿರಜ್ ನಗರದ ಸಚಿನ ಆಸ್ಪತ್ರೆಯಲ್ಲಿ ಮಾಸಿಕವಾಗಿ ಬಂಜೆತನ ನಿವಾರಣೆ ಹಾಗೂ ಮಹಿಳೆಯರ ಗುಪ್ತ ರೋಗಗಳ ಕುರಿತು ಉಚಿತ ಶಿಬಿರ ಏರ್ಪಡಿಸಲಾಗುತ್ತಿದ್ದು, ಸಾರ್ವಜನಿಕರು ಲಾಭ ಪಡೆಯಬೇಕು ಎಂದು ಡಾ. ಸಚಿನ ಸುಗಣ್ಣವರ ಹೇಳಿದರು.

ಸಮೀಪದ ಮಿರಜ ಪಟ್ಟಣದಲ್ಲಿರುವ ಸಚಿನ ಟೆಸ್ಟ್ ಟ್ಯೂಬ್ ಬೇಬಿ ಸೆಂಟರ್‌ನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉಚಿತ ಬಂಜೆತನ ನಿವಾರಣೆ ಹಾಗೂ ಉಪಚಾರ ಶಿಬಿರ ಉದ್ಘಾಟಿಸಿ ಮಾತನಾಡಿದರು. ಜನರು ಸುಖ-ಸಂಪತ್ತು ಗಳಿಸಿದ್ದರೂ ಒಂದಿಲ್ಲೊಂದು ಸಮಸ್ಯೆ ಎದುರಿಸುತ್ತಿದ್ದಾರೆ. ಅವುಗಳಲ್ಲಿ ಬಂಜೆತನವೂ ಒಂದು. ಸಚಿನ ಟೆಸ್ಟ್‌ಟ್ಯೂಬ್ ಬೇಬಿ ಸೆಂಟರ್‌ನಲ್ಲಿ ಐಯುಐ, ಐವಿಎಫ್, ಐಸಿಎಸ್‌ಐ, ಐಎಂಎಸ್‌ಐ, ಲೇಸರ್ ಹಚಿಂಗ್, ವಿಟ್ರಿಫಿಕೇಶನ್ ಮತ್ತು ಉನ್ನತ ತಂತ್ರಜ್ಞಾನದ ಮೂಲಕ ಯೋಗ್ಯ ಚಿಕಿತ್ಸೆ ನೀಡಿ, ಕಡಿಮೆ ಖರ್ಚಿನಲ್ಲಿ ಬಂಜೆತನ ಹೋಗಲಾಡಿಸಬಹುದು ಎಂದರು. ಕರ್ನಾಟಕ ಹಾಗೂ ಮಹಾರಾಷ್ಟ್ರದ ನೂರಾರು ದಂಪತಿ ಶಿಬಿರದ ಲಾಭ ಪಡೆದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net