ಭಾರತೀಯರಿಗೆ ಶ್ರಾವಣ ಮಾಸ ಶ್ರೇಷ್ಠ

28ATHANIGRAMIN1
Published on

ಅಥಣಿ ಗ್ರಾಮೀಣ: ಭಾರತೀಯ ಸಂಸ್ಕೃತಿಯಲ್ಲಿ ಶ್ರಾವಣ ಮಾಸ ಶ್ರೇಷ್ಠ. ಕೆಟ್ಟ ಮನಸುಗಳು ಒಳ್ಳೆಯದನ್ನು ನೋಡಿ, ಕೇಳಿ ಪುಣ್ಯಪ್ರಾಪ್ತಿ ಮಾಡಿಕೊಳ್ಳಲು ದೇವನಿಗಾಗಿ ಮೀಸಲಿಡಬೇಕು ಎಂದು ವಿಜಯಪುರದ ಜ್ಞಾನಯೋಗಾಶ್ರಮದ ಸಂಗಮೇಶ್ವರ ಸ್ವಾಮೀಜಿ ಹೇಳಿದರು.

ಅಥಣಿ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಶ್ರಾವಣ ಮಾಸ ನಿಮಿತ್ತ ಭಾನುವಾರದಿಂದ ಒಂದು ತಿಂಗಳ ಪರ್ಯಂತ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ದ್ವೇಷ, ಅಸೂಯೆಯಿಂದ ನೂರು ವರ್ಷ ಬದುಕುವುದಕ್ಕಿಂತ ಎಲ್ಲರೊಂದಿಗೆ ಪ್ರೀತಿ, ಪ್ರೇಮದಿಂದ ಮೂರೇ ವರ್ಷ ಬದುಕಿದರೂ ಜನ್ಮ ಸಾರ್ಥಕವೆನಿಸಿಕೊಳ್ಳುತ್ತದೆ ಎಂದರು.

ನದಿ ಇಂಗಳಗಾಂವದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮಾತನಾಡಿದರೆ ಹದಯ ಅರಳುವಂತೆ ಮಾತನಾಡಬೇಕು. ಮುಖದಲ್ಲಿರುವ ನಗು ಎಂತಹ ವೈರಿಯನ್ನೂ ಬದಲು ಮಾಡುತ್ತದೆ ಎಂದರು.

ಯಕ್ಕಂಚಿಯ ಗುರುಪಾದ ಸ್ವಾಮೀಜಿ, ಅಥಣಿಯ ಮರುಳಸಿದ್ಧ ಸ್ವಾಮೀಜಿ ಮಾತನಾಡಿದರು. ನರಸಪ್ಪ ಮಹಿಷವಾಡಗಿ, ಶಿವಪುತ್ರ ಕುರಬರ, ಶಿವಾನಂದ ಮಹಿಷವಾಡಗಿ, ಸದಾಶಿವ ಕನಾಳ, ಶ್ರೀಶೈಲ ಕಿಡಿ, ಪ್ರಕಾಶ ಪೂಜಾರಿ, ಕಲ್ಲಪ್ಪ ಕನಾಳ, ಮಲ್ಲಯ್ಯ ಹಿರೇಮಠ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net