ಮನೆಗಳಿಗೆ ನುಗ್ಗಿದ ಹಳ್ಳದ ನೀರು

19BLH3
ಮರಕುಂಬಿ ಗ್ರಾಮದಲ್ಲಿ ಮನೆಗಳಿಗೆ ಹಳ್ಳದ ನೀರು ನುಗ್ಗಿರುವುದು.
Published on

ಬೈಲಹೊಂಗಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಸಮೀಪದ ಮರಕುಂಬಿ ಗ್ರಾಮದಲ್ಲಿ ಮನೆಗಳಿಗೆ ಶನಿವಾರ ಹಳ್ಳದ ನೀರು ನುಗ್ಗಿ ಮನೆಬಳಕೆ ಸಾಮಗ್ರಿಗಳು, ಕಾಳು ನಾಶವಾಗಿದೆ. ಗ್ರಾಮದ ಕೋಲಕಾರ ಓಣಿಯಲ್ಲಿ ಭಾರಿ ಪ್ರಮಾಣದಲ್ಲಿ ಹಳ್ಳದ ನೀರು ಮತ್ತು ಚರಂಡಿ ನೀರು 10ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ. ಅಲ್ಲಿನ ನಿವಾಸಿಗಳು ನೀರು ಹೊರ ಹಾಕಲು ಪರದಾಡಿದರು. ಹಳ್ಳಕ್ಕೆ ಸಮರ್ಪಕ ತಡೆಗೋಡೆ ಇಲ್ಲದ ಕಾರಣ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಈ ಸಮಸ್ಯೆ ಉಂಟಾಗಿದೆ.

ಮುರಗೋಡ ವರದಿ: ಗ್ರಾಮದಲ್ಲಿ ಶನಿವಾರ ಸುರಿದ ಭಾರಿ ಮಳೆಗೆ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ. ರೈತ ಶಿವಾನಂದ ಕಾಜಗಾರ ಅವರು ಹೊಲದಲ್ಲಿ ಬೆಳೆದ ಜೋಳ, ಕಡಲೆ ಹಾಗೂ 3 ಎಕರೆ ಗೋವಿನಜೋಳ ಸಂಪೂರ್ಣವಾಗಿ ನೀರಲ್ಲಿ ನಿಂತಿದೆ. ಕೆಲವು ಮನೆಗಳಿಗೆ ನೀರು ನುಗ್ಗಿದ್ದು, ನೀರು ಹೊರಹಾಕಲು ಜನ ಪರದಾಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net