

ರಾಯಬಾಗ: ದೇಸಿ ಕ್ರೀಡೆ ಕಬಡ್ಡಿಗೆ ತನ್ನದೆಯಾದ ಐತಿಹಾಸಿಕ ಮಹತ್ವವಿದೆ ಎಂದು ಕ್ಯಾರಗುಡ್ಡ ಅವಜೀಕರ ಧ್ಯಾನಯೋಗಾಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಮಹಾವೀರ ಭವನ ಆವರಣದಲ್ಲಿ ಶಾಸಕ ಡಿ.ಎಂ. ಐಹೊಳೆ ಜನ್ಮದಿನದ ಪ್ರಯುಕ್ತ ಮಹಾಲಿಂಗೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸಾರಥ್ಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಅಖಿಲ ಭಾರತ ’ಎ’ ಗ್ರೇಡ್ ಮಹಿಳಾ ಕಬಡ್ಡಿ ಪಂದ್ಯಾವಳಿಗಳಿಗೆ ಚಾಲನೆ ನೀಡಿ ಮಾತನಾಡಿದರು. ದೈಹಿಕವಾಗಿ ಸದಢರಾಗಲು ಕಬಡ್ಡಿ ಸಹಕಾರಿ. ಶಾಸಕರು ಗ್ರಾಮೀಣ ಪ್ರತಿಭಾವಂತ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಲು ಕಬಡ್ಡಿ ಪಂದ್ಯಾವಳಿ ಆಯೋಜಿಸಿದ್ದು, ಕ್ರೀಡಾಪಟುಗಳು ವೇದಿಕೆ ಸದುಪಯೋಗ ಪಡೆಯಬೇಕು ಎಂದರು.
40 ತಂಡಗಳು ಭಾಗಿ: ಮೂರು ದಿನ ನಡೆಯಲಿರುವ ಪಂದ್ಯಾವಳಿಯಲ್ಲಿ ಹರ್ಯಾಣ, ದೆಹಲಿ, ರಾಜಸ್ತಾನ, ತಮಿಳುನಾಡು ಸೇರಿ ದೇಶದ ವಿವಿಧ ರಾಜ್ಯಗಳಿಂದ ಸುಮಾರು 40 ತಂಡಗಳು ಭಾಗವಹಿಸಲಿವೆ.
ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಡಿ.ಎಂ. ಐಹೊಳೆ, ರಾಜ್ಯ ರೆರಿ ಬೋರ್ಡ್ ಚೇರ್ಮನ್ ಎಂ.ಷಣ್ಮುಗಂ, ಕಬಡ್ಡಿ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಸಂಜು ಮಸಾಲಜಿ, ಸಂಜು ಮೈಶಾಳೆ, ಸದಾಶಿವ ಘೋರ್ಪಡೆ, ಅರುಣ ಐಹೊಳೆ, ಶಿವಾನಂದ ಐಹೊಳೆ, ಮಹೇಶ ಕರಮಡಿ, ಸುರೇಶ ಮಾಳಿ, ಜಿಯಾವುಲ್ಲ ಮುಲ್ಲಾ, ಶಿವು ಕೋಳಿ, ಚಿದಾನಂದ ಹಳಿಂಗಳಿ, ಮಹೇಶ ಕುಲಗುಡೆ, ಉಮೇಶ ಮೇತ್ರಿ, ರಿಯಾಜ್ ಮೋಮಿನ್, ರಿತೇಶ ಅವಳೆ, ರಾಕೇಶ ಅವಳೆ, ಗೋಪಾಲ ಕೋಚೇರಿ, ಮಾರುತಿ ಬಂತೆ, ಅಪ್ಪಾಸಾಬ ಕೆಂಗನ್ನವರ ಇತರರಿದ್ದರು.