

ಮುನವಳ್ಳಿ: ದಿನಾಚರಣೆಗಷ್ಟೇ ಯೋಗ ಸೀಮಿತಗೊಳಿಸದೆ ದೈನಂದಿನ ಜೀವನದಲ್ಲಿಯೂ ರೂಢಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದು ಬೆಳಗಾವಿ ಡಯಟ್ ಪ್ರಾಚಾರ್ಯ ಬಸವರಾಜ ನಾಲತವಾಡ ಹೇಳಿದರು.
ಪಟ್ಟಣದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಸಭಾ ಭವನದಲ್ಲಿ ಜಿಪಂ, ಶಾಲಾ ಶಿಣ ಇಲಾಖೆ, ಡಿಡಿಪಿಐ ಕಚೇರಿ, ಬಿಇಒ ಕಚೇರಿ ಹಾಗೂ ಜೆಎಸ್ಪಿ ಸಂದ ಆರ್.ಬಿ.ಯಲಿಗಾರ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಯೋಗ ಮತ್ತು ಚದುರಂಗ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಟಿಎಪಿಸಿಎಂಎಸ್ ಅಧ್ಯ ರವೀಂದ್ರ ಯಲಿಗಾರ, ಬಿಇಒ ಎ.ಎ.ಖಾಜಿ ಮಾತನಾಡಿ, ಯೋಗ ಮತ್ತು ಚೆಸ್ ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಗೆ ಸಹಕಾರಿಯಾಗಿವೆ ಎಂದರು.
ಯೋಗ ಗುರು ಆರ್.ಎಚ್.ಪಾಟೀಲ, ರಾಷ್ಟ್ರೀಯ ಯೋಗಪಟು ಸಂಜು ಬೆಳ್ಳಿಕುಪ್ಪಿ, ವೈ.ಎಚ್.ಗೌಡರ, ಅರುಣ ಹೊನ್ನಳ್ಳಿ ಅವರನ್ನು ಸನ್ಮಾನಿಸಲಾಯಿತು. ಮಕ್ಕಳು ಯೋಗ ಪ್ರದರ್ಶನ ನೀಡಿದರು.
ಜೆಎಸ್ಪಿ ಸಂದ ಅಧ್ಯ ಎಂ.ಆರ್.ಗೋಪಶೆಟ್ಟಿ, ಪುರಸಭೆ ಅಧ್ಯ ಸಿ.ಬಿ.ಬಾಳಿ, ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ೇತ್ರ ಸಮನ್ವಯಾಧಿಕಾರಿ ಬಿ.ಎನ್.ಬ್ಯಾಳಿ, ಶಿಣ ಸಂಯೋಜಕ ಸುಧೀರ ವಾಗೇರಿ, ದೈಹಿಕ ಶಿಣ ಪರಿವೀಕರಾದ ಎಂ.ಬಿ.ಕೊಪ್ಪದ, ಸಾಧನಾ ಬದ್ರಿ, ಎ.ಎ.ಕರೀಕಟ್ಟಿ, ಎಂ.ಎಂ.ಮುರನಾಳ, ಎಂ.ಎಚ್.ಕಾಮಣ್ಣವರ, ಎಂ.ಎ.ಕಮತಗಿ, ಭವಾನಿ ಖೊಂದುನಾಯ್ಕ, ವೈ.ಟಿ.ತಂಗೋಜಿ, ಎಂ.ಎಂ.ಲಕ್ಕನ್ನವರ, ಶ್ರೀಶೈಲ ಗೋಪಶೆಟ್ಟಿ, ಅಶೋಕ ಸಂಕನ್ನವರ, ಸುರೇಶ ಜಾಧವ, ಕಿರಣ ನಾಯ್ಕರ, ಅಪ್ಪು ಹಿರಲಿಂಗನ್ನವರ, ದಾನು ಗದಗಿನ, ಎ.ಎ.ಮುಲ್ಲಾ, ಎ.ಎ್.ಶಾನಭೋಗ, ಪರುಶುರಾಮ ಕದಂ ಇತರರಿದ್ದರು.