ಆರೋಗ್ಯ ತಪಾಸಣೆ ಏ.1ಕ್ಕೆ

byv health camp
Published on


ಮೈಸೂರು: ನಗರದ ಅಗ್ರಹಾರ ನೂರೊಂದು ಗಣಪತಿ ದೇವಸ್ಥಾನದ ಬಳಿಯಿರುವ ಆರೋಗ್ಯ ಮಂದಿರದಲ್ಲಿ ಏ.1ರ ಶನಿವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 12ಗಂಟೆ ವರೆಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ.


ಶಿಬಿರದಲ್ಲಿ ರಕ್ತ, ಮೂತ್ರ ತಪಾಸಣೆ ಜತೆಗೆ ಆಯುರ್ವೇದದಲ್ಲಿ ತಿಳಿಸಿರುವ ಆಹಾರ, ಜೀವನ ಶೈಲಿ, ಯೋಗ, ವ್ಯಾಯಾಮದ ಬಗ್ಗೆ ಮಾಹಿತಿ ನೀಡಲಾಗುವುದು. ಆಸಕ್ತರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆಗಮಿಸಿ ತಪಾಸಣೆಗೆ ಒಳಗಾಗಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net