

ಕಂಪ್ಲಿ: ಇಲ್ಲಿನ ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ವಯೋನಿವೃತ್ತಿ ಹೊಂದಿದ್ದರಿಂದ, ಪಟ್ಟಣದ ಮಾರುತಿನಗರದ ಸಮುದಾಯ ಭವನದಲ್ಲಿ ರಾಜ್ಯ ಪೌರ ನೌಕರರ ಸಂಘ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭ ಶನಿವಾರ ನಡೆಯಿತು.
ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಮುಖ್ಯಾಧಿಕಾರಿ ನೇರ ನಿಷ್ಠುರವಾದಿಯಾಗಿದ್ದರು. ಮಾರ್ಗಸೂಚಿಯಂತೆಯೇ ಸಕಾಲದಲ್ಲಿ ಕೆಲಸ ನಿರ್ವಹಿಸಿಕೊಡುವಲ್ಲಿ ಮುಂದಿದ್ದರು ಎಂದರು.
ಗೌರವ ಸ್ವೀಕರಿಸಿದ ನಿವೃತ್ತ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ಸರ್ಕಾರಿ ನೌಕರರಿಗೆ ಸೇವೆಯೇ ಗುರಿ ಆಗಿರಬೇಕು. ಕಾನೂನಿನ ಚೌಕಟ್ಟಿನಲ್ಲಿಯೇ ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಸಕಾಲದಲ್ಲಿ ಸೇವೆ ಸಲ್ಲಿಸಲು ಸಿದ್ಧರಾಗಿರಬೇಕು. ಜನ ಮೆಚ್ಚುವಂತೆ ಕೆಲಸ ಮಾಡಬೇಕು ಎಂದು ಹೇಳಿದರು.
ಬಳ್ಳಾರಿ ಡಿಯುಡಿಸಿ, ಪೌರ ನೌಕರರು, ಪುರಸಭೆ ಆಡಳಿತ ಸೇರಿ ನಾನಾ ಇಲಾಖೆ ಅಧಿಕಾರಿಗಳು, ಪ್ರಗತಿಪರ ಸಂಘಟನೆಗಳು, ಗಣ್ಯರು ನಿವೃತ್ತಿಹೊಂದಿದ ಕೆ.ದುರುಗಣ್ಣ ಮತ್ತು ಮಾರೆಮ್ಮ ದಂಪತಿಯನ್ನು ಗೌರವಿಸಲಾಯಿತು. ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಪ್ರಕಾಶ್‌ಬಾಬು, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ತಹಸೀಲ್ದಾರ್ ಜೂಗಲ ಮಂಜುನಾಯಕ, ಪುರಸಭೆ ಸದಸ್ಯರಾದ ವಿ.ಎಲ್.ಬಾಬು, ಕೆ.ಎಸ್.ಚಾಂದ್‌ಬಾಷಾ, ಟಿ.ವಿ.ಸುದರ್ಶನರೆಡ್ಡಿ, ಲಡ್ಡು ಹೊನ್ನೂವರ್‌ವಲಿ, ಹೂಗಾರ ರಮೇಶ, ಡಿ.ಮೌನೇಶ, ಗದ್ಗಿ ವಿರೂಪಾಕ್ಷಿ, ಜಿ.ಬಿ.ಕೋಟೇಶ, ಕೆ.ಕೃಷ್ಣ, ಪುರಸಭೆ ಸಿಬ್ಬಂದಿ ರಮೇಶ್ ಬೆಳಂಕರ, ಮೇಘನಾ, ನಾಗಭೂಷಣ, ಮಲ್ಲಿಕಾರ್ಜುನ, ಜ್ಯೋತಿ, ಆನಂದ ಗಿರಿಜಾಲಿ ಇತರರಿದ್ದರು.